Friday, April 26, 2024
spot_imgspot_img
spot_imgspot_img

14 ವರ್ಷದ ಬಳಿಕ ಹೆಚ್ಚಾದ ಬೆಂಕಿ ಪೊಟ್ಟಣದ ಬೆಲೆ.!

- Advertisement -G L Acharya panikkar
- Advertisement -

ಅಗತ್ಯ ವಸ್ತುಗಳ ಬೆಲೆ ಏರಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪೆಟ್ರೋಲ್-ಡಿಸೇಲ್, ಬಂಗಾರ, ತೈಲ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಂಕಿ ಪೊಟ್ಟಣದ ಬೆಲೆ ಏರಿಕೆ ಕಾಣಲಿದೆ ಎಂದು ತಿಳಿದು ಬಂದಿದೆ.

ತಮಿಳುನಾಡಿನ ಶಿವಕಾಶಿಯಲ್ಲಿ ಐದು ಪ್ರಮುಖ ಬೆಂಕಿಪೊಟ್ಟಣದ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆದಿದೆ. ಸಭೆಯಲ್ಲಿ ಬೆಂಕಿಪೊಟ್ಟಣದ ಬೆಲೆ ಏರಿಕೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 1 ರಿಂದ ಬೆಂಕಿ ಪೊಟ್ಟಣದ ಬೆಲೆ ಏರಲಿದೆ ಎನ್ನಲಾಗಿದೆ. ಒಂದು ರೂಪಾಯಿಯಿದ್ದ ಬೆಲೆ 2 ರೂಪಾಯಿಯಾಗಲಿದೆ.

2007ರಲ್ಲಿ ಬೆಂಕಿಪೊಟ್ಟಣದ ಬೆಲೆಯನ್ನು ಏರಿಸಲಾಗಿತ್ತು. 50 ಪೈಸೆಯಿದ್ದ ಬೆಲೆಯನ್ನು 1 ರೂಪಾಯಿಗೆ ಏರಿಸಲಾಗಿತ್ತು. 14 ವರ್ಷದ ನಂತರ ಪೊಟ್ಟಣದ ಬೆಲೆ ಹೆಚ್ಚಾಗ್ತಿದೆ. ಬೆಂಕಿಕಡ್ಡಿಗಳನ್ನು ತಯಾರಿಸಲು 14 ರೀತಿಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಈ ಎಲ್ಲಾ ಕಚ್ಚಾ ವಸ್ತುಗಳ ಬೆಲೆಗಳು ಸಾಕಷ್ಟು ಹೆಚ್ಚಾಗಿದೆ. ಹಾಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ.

ಕೆಂಪು ರಂಜಕದಿ0ದ ಹಿಡಿದು, ಮೇಣ, ಬಾಕ್ಸ್ ಬೋರ್ಡ್, ಪೇಪರ್, ಸ್ಪ್ಲಿಂಟ್ಸ್, ಪೊಟಾಶಿಯಂ ಕ್ಲೋರೇಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದ್ದು, ಹೀಗಾಗಿ ಬೆಂಕಿಪೊಟ್ಟಣದ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ.

- Advertisement -

Related news

error: Content is protected !!