Tuesday, July 21, 2026
spot_imgspot_img
spot_imgspot_img

ವಿಟ್ಲ: ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸತತವಾಗಿ ಶೇ. 100% ಫಲಿತಾಂಶದೊಂದಿಗೆ ಈ ಬಾರಿಯೂ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ದಾಖಲೆ ಸೃಷ್ಟಿಸಿದೆ.

619 ಅಂಕಗಳೊಂದಿಗೆ ರಾಜ್ಯಕ್ಕೆ 8 ನೇ ರಾಂಕ್ ಮತ್ತು ಬಂಟ್ವಾಳ ತಾಲೂಕಿಗೆ ದ್ವಿತೀಯ ಸ್ಥಾನ, ಮತ್ತು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ದಯಾಳ್ ಕೆ ಮತ್ತು 616 ಅಂಕಗಳ ಮೂಲಕ ಶಾಲೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಶಮಾ ಇವರ ಮನೆಗೆ ತೆರಳಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರು ಜಯರಾಮ್ ರೈ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಜೆಸಿ ಶ್ರೀಧರ್ ಶೆಟ್ಟಿ, ಉಪಾಧ್ಯಕ್ಷರು ಜೆಸಿ ರಾಧಾಕೃಷ್ಣ ಪೈ, ಖಜಾಂಚಿ ಜೆಸಿ ಪ್ರಭಾಕರ್ ಶೆಟ್ಟಿ, ಶಾಲಾ ಶಿಕ್ಷಕಿಯರು ಕವಿತಾ, ಎಮಿಲ್ದಾ ಸೀಮಾ, ಸವಿತಾ, ಸುಜಾತಾ, ತುಳಸಿ ಉಪಸ್ಥಿತರಿದ್ದರು.

- Advertisement -

Related news

error: Content is protected !!