Saturday, October 31, 2026
spot_imgspot_img
spot_imgspot_img

ಕಡೇಶಿವಾಲಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಧ್ವಜಸ್ತಂಭದ ಭವ್ಯ ಶೋಭಾಯಾತ್ರೆ ಸಂಪನ್ನ

- Advertisement -
- Advertisement -

ಬಂಟ್ವಾಳ: ಕಡೇಶಿವಾಲಯ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಧ್ವಜಸ್ತಂಭದ ಭವ್ಯ ಶೋಭಾಯಾತ್ರೆಯು ಆ.31ರಂದು ಅತ್ಯಂತ ವಿಜೃಂಭಣೆಯಿಂದ ನಡೆಯಿತು.ಬುಡೋಳಿಯಿಂದ ಮೆರವಣಿಗೆಯ ಮೂಲಕ ಆರಂಭಗೊಂಡ ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು.

ಬುಡೋಳಿಯಿಂದ ಕಡೇ ಶಿವಾಲಯದವರೆಗೆ ಸಾಗಿದ ಮೆರವಣಿಗೆಯುದ್ದಕ್ಕೂ ಭಕ್ತರು ತಳಿರು ತೋರಣಗಳಿಂದ ಅಲಂಕರಿಸಿ, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಭವ್ಯ ಸ್ವಾಗತ ಕೋರಿದರು.ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಡಾ. ಪ್ರಭಾಕರ ಭಟ್ ಕಲ್ಲಡ್ಕ, ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಹಾಗೂ ವಾಸ್ತು ತಜ್ಞ ಕೃಷ್ಣರಾಜ ತಂತ್ರಿ ಸೇರಿದಂತೆ ಹಲವು ಗಣ್ಯರು ಶೋಭಾಯಾತ್ರೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ನುಳಿಯಾಲು, ಸಮಿತಿಯ ಸದಸ್ಯರು ಹಾಗೂ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

ರವಿಶಂಕರ್ ಶೆಟ್ಟಿ ಬಡಾಜೆಗುತ್ತು, ಪ್ರಸಾದ್ ಕುಮಾರ್ ಶೆಟ್ಟಿ (ಬಾಲಣ್ಣ), ಸಿಎ ಶಾಂತಾರಾಮ ಶೆಟ್ಟಿ, ಅಶ್ವಿನಿ ಕುಮಾರ್ ರೈ, ಎನ್. ರವೀಂದ್ರ ಶೆಟ್ಟಿ, ರಾಘವೇಂದ್ರ ಅಷ್ಟೆಂಗಳ, ಚಂದ್ರಹಾಸ ಶೆಟ್ಟಿ, ಐತಪ್ಪ ಅಳ್ವ ಸುಜೀರ್ ಗುತ್ತು, ಆನಂದ ಶೆಟ್ಟಿ ಅಡ್ಯಾರ್, ಜೆ. ಕೃಷ್ಣ ಭಟ್, ಮಲ್ಲಿಕ ಪಕ್ಕಳ, ಜಗನ್ನಾಥ ಚೌಟ ಬದಿಗುಡ್ಡೆ, ದೇವಪ್ಪ ಕುಲಾಲ್, ಅಪ್ರಾಯ ಪೈ ಬುಡೋಳಿ, ಕುಶಲ ಎಂ. ಪೆರಾಜೆ, ಡಾ. ಶ್ರೀನಾಥ್ ಆಳ್ವ, ಸಂಜೀವ ಹೆಚ್., ಕರುಣಾಕರ ಶೆಟ್ಟಿ, ದಾಮೋದರ ಪಾಟಾಳಿ, ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ, ಜಯಪ್ರಕಾಶ್ ರೈ ಚೆಲ್ಲಡ್ಕ, ಕೃಷ್ಣರಾಜ ಭಟ್, ರಘುನಾಥ ಸೋಮಯಾಜಿ ಹಾಗೂ ಸಂದೇಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

- Advertisement -

Related news

error: Content is protected !!