- Advertisement -
- Advertisement -
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಸದಾ ಸಮಾಜದ ಏಳಿಗೆಗಾಗಿ ದುಡಿಯುತ್ತಿರುವ ಸಿದ್ದಿವಿನಾಯಕ ಯುವಕ ಮಂಡಲವು ತನ್ನ ಸಮಾಜಮುಖಿ ಕಾರ್ಯಗಳ ಮೂಲಕ ಮತ್ತೊಮ್ಮೆ ತನ್ನ ಛಾಪನ್ನು ಮೂಡಿಸಿದೆ.ಸಿದ್ದಿವಿನಾಯಕ ಯುವಕ ಮಂಡಲದ 28 ಮತ್ತು 29ನೇ ಸೇವಾನಿಧಿಯ ಅಂಗವಾಗಿ ಆರ್ಥಿಕ ಸಂಕಷ್ಟದಲ್ಲಿರುವ ಒಂದು ಕುಟುಂಬಕ್ಕೆ ₹10,000 ನಗದು ನೆರವು ಹಾಗೂ ದಿನಬಳಕೆಯ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಅದರ ಜೊತೆಗೆ ಇನ್ನೂ 2 ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಸಿದ್ದಿವಿನಾಯಕ ಯುವಕ ಮಂಡಲದ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
- Advertisement -








