ಕೊಲಂಬೊ: ಫೇಸ್ಬುಕ್ ನಲ್ಲಿ ಮಾಡಿದ ಕಮೆಂಟ್ ನಿಂದಾಗಿ ಮರಣದಂಡನೆಗೆ ಗುರಿಯಾಗಿದ್ದ ಶ್ರೀಲಂಕಾದ 27 ವರ್ಷದ ವಲಸೆ ಕಾರ್ಮಿಕ ಅನೋಜನ್ ಶಿವರಸ ಅವರಿಗೆ ಕೊನೆಗೂ ಸಮಾಧಾನಕರ ಸುದ್ದಿ ಸಿಕ್ಕಿದೆ. ಅವರಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಸೌದಿ ಅರೇಬಿಯಾದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಎಂದು ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಅರುಣ್ ಹೇಮಚಂದ್ರ ತಿಳಿಸಿದ್ದಾರೆ ಎಂದು bbc.com ವರದಿ ಮಾಡಿದೆ.
ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಹೇಳನ ಮಾಡುವ ರೀತಿಯಲ್ಲಿ ಫೇಸ್ ಬುಕ್ ನಲ್ಲಿ ಕಮೆಂಟ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಶಿವರಸ ಅವರಿಗೆ ಸೆಪ್ಟೆಂಬರ್ ನಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಸೌದಿ ಅರೇಬಿಯಾದ ಮೇಲ್ಮನವಿ ನ್ಯಾಯಾಲಯ ಈ ಆರೋಪದ ಕುರಿತು ತೀರ್ಪು ನೀಡಿದ ಬಳಿಕ ಶಿಕ್ಷೆ ಪ್ರಕಟವಾಗಿತ್ತು. ಈ ಬೆಳವಣಿಗೆ ಶ್ರೀಲಂಕಾದಲ್ಲಿ ತೀವ್ರ ಆತಂಕ ಮೂಡಿಸಿತ್ತು. ಶಿವರಸ ಅವರ ಜೀವ ಉಳಿಸುವಂತೆ ಕೋರಿ ರಾಜತಾಂತ್ರಿಕ ಮಟ್ಟದಲ್ಲಿ ಪ್ರಯತ್ನಗಳೂ ನಡೆದಿದ್ದವು.
ಸೌದಿ ಅರೇಬಿಯದ ಸುಪ್ರೀಂ ಕೋರ್ಟ್ ಬುಧವಾರ ಮರಣದಂಡನೆಯನ್ನು ರದ್ದುಗೊಳಿಸಿದೆ ಎಂದು ಹೇಮಚಂದ್ರ ಫೇಸ್ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಪ್ರಯತ್ನ ನಡೆಸಿದ ಉಭಯ ದೇಶಗಳ ಅಧಿಕಾರಿಗಳು ಮತ್ತು ಕಾನೂನು ತಂಡಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.
ಏನಿದು ಪ್ರಕರಣ?
ಜೂನ್ ಅಂತ್ಯದಲ್ಲಿ ಹಿಂದೂ ಯಾತ್ರಾರ್ಥಿಗಳ ಹಿಂದೆ ಬರುತ್ತಿದ್ದ ನಾಯಿಯೊಂದಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬರು ಒದೆಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೊದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ವಿಚಾರವಾಗಿ ಪರ-ವಿರೋಧದ ಚರ್ಚೆಗಳು ಆರಂಭವಾಗಿದ್ದವು.
ಈ ಚರ್ಚೆಯ ನಡುವೆ ಬಳಕೆದಾರರೊಬ್ಬರು ಹಿಂದೂ ದೇವತೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಶಿವರಸ ಅವರು ಪ್ರವಾದಿ ಮುಹಮ್ಮದ್ ಅವರನ್ನು ಅವಹೇಳನ ಮಾಡುವ ರೀತಿಯಲ್ಲಿ ತಮಿಳು ಭಾಷೆಯಲ್ಲಿ ಕಮೆಂಟ್ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಶಿವರಸ ಅವರು ಫೇಸ್ಬುಕ್ ಕಮೆಂಟ್ ಅಳಿಸಿ, ಕ್ಷಮೆಯಾಚಿಸುವ ವೀಡಿಯೊವನ್ನೂ ಪ್ರಕಟಿಸಿದ್ದರು. ಆದರೆ, ಅವರು ಮಾಡಿದ್ದ ಕಮೆಂಟ್ ನ ಸ್ಟೀನ್ಶಾಟ್ ಅವರ ಕಂಪೆನಿಯ ಆಡಳಿತ ಮಂಡಳಿ ಮತ್ತು ಸೌದಿ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಬಳಿಕ ಜುಲೈನಲ್ಲಿ ಅವರನ್ನು ಬಂಧಿಸಲಾಗಿತ್ತು.
ಆರಂಭದಲ್ಲಿ ಅಲ್-ಅಹ್ವಾ ಕ್ರಿಮಿನಲ್ ನ್ಯಾಯಾಲಯವು ಶಿವರಸ ಅ NEW ದು ವರ್ಷಗಳ ಜೈಲು ಶಿಕ್ಷೆ ಮತ್ತು ಮೂರು ಮಿಲಿಯನ್ ಯಾಲ್ ದಂಡ ವಿಧಿಸಿತ್ತು. ಈ ದಂಡದ ಮೊತ್ತ ಸುವ ಕೋಟಿ ರೂ.ಗೆ ಸಮನಾಗಿದೆ. ಬಳಿಕ ಮೇಲ್ಮನವಿ ಪ್ರಕ್ರಿಯೆಯ ಅವರಿಗೆ ಮರಣದಂಡನೆ ವಿಧಿಸಲಾಗಿತು.
ಆರಂಭದಲ್ಲಿ ಅಲ್-ಅಹ್ಲಾ ಕ್ರಿಮಿನಲ್ ನ್ಯಾಯಾಲಯವು ಶಿವರಸ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಮೂರು ಮಿಲಿಯನ್ ಸೌದಿ ರಿಯಾಲ್ ದಂಡ ವಿಧಿಸಿತ್ತು. ಈ ದಂಡದ ಮೊತ್ತ ಸುಮಾರು 7.6 ಕೋಟಿ ರೂ.ಗೆ ಸಮನಾಗಿದೆ. ಬಳಿಕ ಮೇಲ್ಮನವಿ ಪ್ರಕ್ರಿಯೆಯಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು.
ಮರಣದಂಡನೆ ರದ್ದಾಗಿರುವುದು ಶಿವರಸ ಅವರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾದರೂ, ಮುಂದಿನ ಕಾನೂನು ಪ್ರಕ್ರಿಯೆಗಳು ಹೇಗೆ ನಡೆಯಲಿವೆ ಮತ್ತು ಅವರು ಇನ್ನೂ ಎಷ್ಟು ಕಾಲ ಬಂಧನದಲ್ಲಿ ಇರಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
ಜೀವ ಉಳಿಸಲು ಮಾನವ ಹಕ್ಕುಗಳ ಸಂಘಟನೆಗಳ ಅಭಿಯಾನ:
ಶಿವರಸ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯದೊಂದಿಗೆ ಕಾನೂನು ಮಾತುಕತೆ ನಡೆಸುತ್ತಿರುವ ಶ್ರೀಲಂಕಾದ ಜನಪ್ರತಿನಿಧಿ ಫೈಝರ್ ಮುಸ್ತಫಾ ಅವರು ಮರಣದಂಡನೆ ರದ್ದಾಗಿರುವುದನ್ನು BBC ಸಿಂಹಳಕ್ಕೆ ದೃಢಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ನ ಇತ್ತೀಚಿನ ತೀರ್ಪನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ಸೆಪ್ಟೆಂಬರ್ 28ರಿಂದ ಶಿವರಸ ಅವರೊಂದಿಗೆ ಯಾವುದೇ ನೇರ ಸಂಪರ್ಕ ಸಾಧ್ಯವಾಗಿಲ್ಲ ಎಂದು ಅವರ ಕುಟುಂಬ ಈ ಹಿಂದೆ ತಿಳಿಸಿತ್ತು.
ಶಿವರಸ ಅವರ ಜೀವ ಉಳಿಸುವಂತೆ ಸೌದಿ ಅರೇಬಿಯವನ್ನು ಕೋರುವ ಅಭಿಯಾನದಲ್ಲಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳೂ ಕೈಜೋಡಿಸಿದ್ದವು.
ವಾಕ್ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅಪರಾಧಗಳಿಗಾಗಿ ಅತಿಯಾದ ಕಠಿಣ ಶಿಕ್ಷೆಗಳನ್ನು ವಿಧಿಸಲು ಬಳಸಲಾಗುವ ದಮನಕಾರಿ ಕಾನೂನುಗಳ ಪ್ರಯೋಗವನ್ನು ಸೌದಿ ಅಧಿಕಾರಿಗಳು ನಿಲ್ಲಿಸಬೇಕು
ಸೆಪ್ಟೆಂಬರ್ 28ರಿಂದ ಶಿವರಸ ಅವರೊಂದಿಗೆ ಯಾವುದೇ ನೇರ ಸಂಪರ್ಕ ಸಾಧ್ಯವಾಗಿಲ್ಲ ಎಂದು ಅವರ ಕುಟುಂಬ ಈ ಹಿಂದೆ ತಿಳಿಸಿತ್ತು.
ಶಿವರಸ ಅವರ ಜೀವ ಉಳಿಸುವಂತೆ ಸೌದಿ ಅರೇಬಿಯವನ್ನು ಕೋರುವ ಅಭಿಯಾನದಲ್ಲಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳೂ ಕೈಜೋಡಿಸಿದ್ದವು.
ವಾಕ್ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅಪರಾಧಗಳಿಗಾಗಿ ಅತಿಯಾದ ಕಠಿಣ ಶಿಕ್ಷೆಗಳನ್ನು ವಿಧಿಸಲು ಬಳಸಲಾಗುವ ದಮನಕಾರಿ ಕಾನೂನುಗಳ ಪ್ರಯೋಗವನ್ನು ಸೌದಿ ಅಧಿಕಾರಿಗಳು ನಿಲ್ಲಿಸಬೇಕು ಎಂದು ಹೂಮನ್ ರೈಟ್ಸ್ ವಾಚ್ ನ ಸೌದಿ ಅರೇಬಿಯ ವಿಭಾಗದ ಹಿರಿಯ ಸಂಶೋಧಕಿ ಜೋಯಿ ಶಿಯಾ ಮಂಗಳವಾರ ಆಗ್ರಹಿಸಿದ್ದರು.
ವಿಶೇಷವಾಗಿ, ಕಾನೂನು ರಕ್ಷಣೆಯ ಅವಕಾಶಗಳು ಸೀಮಿತವಾಗಿರುವ ದುರ್ಬಲ ಸ್ಥಿತಿಯಲ್ಲಿರುವ ವಲಸೆ ಕಾರ್ಮಿಕರ ವಿರುದ್ಧ ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದರು.








