Sunday, November 1, 2026
spot_imgspot_img
spot_imgspot_img

ಕೊಲೆಗೆ ಯತ್ನ ಆರೋಪ; ರಾಹುಲ್ ಗಾಂಧಿ ವಿರುದ್ಧ ಕೇಸ್

- Advertisement -
- Advertisement -

ನವದೆಹಲಿ: ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಹಲ್ಲೆ ಮತ್ತು ಪ್ರಚೋದನೆ ಆರೋಪದಡಿ ಬಿಜೆಪಿಯವರು ನೀಡಿದ ದೂರಿನಂತೆ ಕೇಸ್ ದಾಖಲಾಗಿದೆ.ಸಂಸತ್ ಭವನದ ಮಕರ ದ್ವಾರದ ಹೊರಗೆ ಸಂಸದರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಬಿಜೆಪಿಯ ಇಬ್ಬರು ಸಂಸದರಾದ ಪ್ರತಾಪ್ ಸಾರಂಗಿ ಮತ್ತು ಮುಖೇಶ್ ರಜಪೂತ್‌ ಅವರ ತಲೆಗೆ ಗಾಯಗೊಂಡಿದ್ದರು. ಈ ಇಬ್ಬರು ಗಾಯಗೊಳ್ಳಲು ರಾಹುಲ್ ಗಾಂದಿ ಕಾರಣ ಎಂದು ಬಿಜೆಪಿ ದೂರು ನೀಡಿತ್ತು.ಭಾರತೀಯ ನ್ಯಾಯ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಾಗಿದೆ. ಸ್ವಯಂಪ್ರೇರಣೆಯಿಂದ ಘೋರವಾದ ಗಾಯವನ್ನು ಉಂಟುಮಾಡುವುದು, ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕ್ರಿಯೆ, ಕ್ರಿಮಿನಲ್ ಬಲದ ಬಳಕೆ, ಕ್ರಿಮಿನಲ್ ಬೆದರಿಕೆ ಮೊದಲಾದ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!