



ಕಡೇಶಿವಾಲಯ: ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪುರುಷೋತ್ತಮ.ಆರ್.ಶೆಟ್ಟಿ ನುಳಿಯಾಲುರವರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ಪುರುಷೋತ್ತಮ.ಆರ್.ಶೆಟ್ಟಿಯವರನ್ನು ಮುಂದಿನ 3 ವರ್ಷದ ಅವಧಿಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997 ರ ವಿಧಿ 26 (2) ರ ಆದೇಶದಂತೆ ನೇಮಕ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪುರುಷೋತ್ತಮ ಆರ್.ಶೆಟ್ಟಿಯವರಿಗೆ ಕಂದಾಯ ನಿರೀಕ್ಷಕರು ವಿಜಯ್ ಆರ್ ಇವರು ಅಧಿಕಾರ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಚಿದಾನಂದ, ಈಶ್ವರ ಪೂಜಾರಿ, ಸತೀಶ್ಷಂದ್ರ ಶೆಟ್ಟಿ, ಶೀನ ನಾಯ್ಕ ನೆಕ್ಕಿಲಾಡಿ, ಸಂಜೀವ ಪೂಜಾರಿ, ಪ್ರೇಮಾ ಎಸ್ ಶೆಟ್ಟಿ, ಶೃತಿ ಹೆಚ್ ಭಂಡಾರಿ, ಉಪಸ್ಥಿತರಿದ್ದರು.
ಸಮಿತಿಯ ಸದಸ್ಯರು ಆಡಳಿತ ಹಸ್ತಾಂತರ ಕಾರ್ಯಕ್ರಮದಲ್ಲಿ ಕೈಜೋಡಿಸಿದರು. ಈ ಸಂದರ್ಭದಲ್ಲಿ ಊರಿನ ಹಲವು ಧಾರ್ಮಿಕ ಮುಖಂಡರು ಅರ್ಚಕರು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.
ಶ್ರಿ ಪುರುಷೋತ್ತಮ ಆರ್ ಶೆಟ್ಟಿಯವರು ಕಡೇಶ್ವಾಲ್ಯ ಗ್ರಾಮದ ನಡ್ಯೇಲು ಮನೆತನದ ದಿ. ಶ್ರೀ ರಾಮಣ್ಣ ಶೆಟ್ಟಿ ಮತ್ತು ಪುತ್ತೂರು ತಾಲೂಕು ನುಳಿಯಾಳು ಮನೆತನದ ದಿ. ಶ್ರೀಮತಿ ಯಮುನಾ ಶೆಟ್ಟಿಯವರ ಸುಪುತ್ರರಾಗಿದ್ದಾರೆ. ಪ್ರಸಕ್ತ ಮಂಗಳೂರಿನಲ್ಲಿ ನೆಲೆಸಿದ್ದು ತಮ್ಮ ಮಾತೃಶ್ರೀಯವರ ಹೆಸರಿನಲ್ಲಿ ಮೇ| ಯಮುನಾ ಗ್ರೂಪ್ ಆಫ್ ಕಂಪೆನಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ವಿವಿಧ ರೀತಿಯ ಉದ್ಯಮವನ್ನು ನಡೆಸಿದ್ದು ನೂರಾರು ಮಂದಿಗೆ ಉದ್ಯೋಗದಾತರಾಗಿರುತ್ತಾರೆ. ಹಾಗೂ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ರಿಗ್ ಮಾಲಕರ ಮತ್ತು ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿರುತ್ತಾರೆ. ತಮ್ಮ ಮಾತೃಶ್ರೀ ಯವರ ಕುಟುಂಬದ ನುಳಿಯಾಳು ತರವಾಡು ಮನೆತನದ ಧರ್ಮಚಾವಡಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕೇವಲ ಒಂಭತ್ತೇ ತಿಂಗಳಲ್ಲಿ ಧರ್ಮಚಾವಡಿ ಹಾಗೂ ಗುತ್ತಿನ ಮನೆಯನ್ನು ನಿರ್ಮಿಸಿ ಒಂದೇ ವಾರದಲ್ಲಿ ಧರ್ಮ ನೇಮವನ್ನು ಯಶಸ್ವಿಯಾಗಿ ನೆರವೇರಿಸಿದ ಸಾಧಕರಿವರು.


ಪ್ರಸಕ್ತ ತನ್ನ ಪಿತಾಶ್ರೀಯವರ ಊರಾದ ಕಡೇಶ್ವಾಲ್ಯ ಗ್ರಾಮದಲ್ಲಿ ಮಹತೋಭಾರ ಚಿಂತಾಮಣಿ ಶ್ರೀ ಲಕ್ಶ್ಮೀ ನರಸಿಂಹ ದೇವಸ್ಥಾನದ ವ್ಯವಸ್ದಾಪನಾ ಸಮಿತಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಸದರಿ ದೇವಸ್ಥಾನದ ಅಭಿವೃದ್ಧಿ ಮತ್ತು ಬ್ರಹ್ಮಕಲಶವನ್ನು ವಿಜ್ರಂಭನೆಯಿಂದ ಊರಿನ ಸಮಸ್ತ ಭಕ್ತರ ಸಹಕಾರದೊಂದಿಗೆ ನೆರೆವೇರಿಸಲು ದೃಡ ಸಂಕಲ್ಪ ಹೊಂದಿರುತ್ತಾರೆ. ಈ ಪುಣ್ಯ ಕಾರ್ಯ ಕ್ರಮವನ್ನು ಯಶಸ್ವಿಯಾಗಿ ನೆರೆವೇರಿಸಲು ಶ್ರೀ ಲಕ್ಶ್ಮೀ ನರಸಿಂಹ ದೇವರ ಅನುಗ್ರಹದೊಂದಿಗೆ ಊರಿನ ಸಮಸ್ತ ನಾಗರಿಕರ, ಭಕ್ತರ ಹಾಗೂ ದಾನಿಗಳ ಸಹಕಾರವನ್ನು ಪುರುಷೋತ್ತಮ ಆರ್ ಶೆಟ್ಟಿಯವರು ಕೋರಿರುತ್ತಾರೆ.








