Sunday, August 16, 2026
spot_imgspot_img
spot_imgspot_img

ಕಾರ್ಕಳ: ಅಜೆಕಾರು ಕೊಲೆ ಪ್ರಕರಣ; ಆರೋಪಿ ಪ್ರತಿಮಾಳ ಜಾಮೀನು ಅರ್ಜಿ ವಜಾ..!

- Advertisement -
- Advertisement -

ಕಾರ್ಕಳ: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ದೆಪ್ಪುತ್ತೆಯ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮೃತರ ಪತ್ನಿ ಪ್ರತಿಮಾಳ ಜಾಮೀನು ಅರ್ಜಿಯನ್ನು ಕಾರ್ಕಳದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಈ ಹಿಂದೆ ಪ್ರಕರಣದ ಮತ್ತೊಬ್ಬ ಆರೋಪಿ ದಿಲೀಪ್ ಹೆಗ್ಡೆಗೆ ಹೈಕೋರ್ಟ್ ಜಾಮೀನು ನೀಡಿದ್ದರೂ, ಪ್ರತಿಮಾ ಮೇಲಿನ ಆರೋಪದ ಸ್ವರೂಪ ಭಿನ್ನವಾಗಿರುವುದರಿಂದ ಆಕೆಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂದು ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಅಕ್ಷೇಪಣೆ ಸಲ್ಲಿಸಿ ವಾದಿಸಿದ್ದರು.

ಪ್ರತಿಮಾ ತನ್ನ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿ 2024ರ ಅ. 20ರಂದು ಪತಿ ಬಾಲಕೃಷ್ಣ ಪೂಜಾರಿ ಅವರನ್ನು ಕೊಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಅ. 25ರಂದು ಪೊಲೀಸರು ಬಂಧಿಸಿದ್ದರು.

- Advertisement -

Related news

error: Content is protected !!