Friday, July 24, 2026
spot_imgspot_img
spot_imgspot_img

ವಿಟ್ಲ: (ಮೇ.18) ವಾಣಿಯನ್‌ ಗಾಣಿಗ ಸಮುದಾಯ ಸೇವಾ ಸಂಘ (ರಿ.) ವತಿಯಿಂದ ವಿಟ್ಲ ವಾಣಿಯೋತ್ಸವ 2025

- Advertisement -
- Advertisement -

ವಿಟ್ಲ: ವಾಣಿಯನ್‌ ಗಾಣಿಗ ಸಮುದಾಯ ಸೇವಾ ಸಂಘ (ರಿ.) ವಿಟ್ಲ ವಾಣಿಯೋತ್ಸವ 2025ವು ಮೇ.18-5-2025ನೇ ಆದಿತ್ಯವಾರ ವಿಟ್ಲ ಗಾರ್ಡನ್‌ ಸಭಾಭವನ ಮೈರ ಕೇಪು ಇಲ್ಲಿ ನಡೆಯಲಿದೆ.

ಪೂ. 8:00ಕ್ಕೆ ಉಪಹಾರ ಬಳಿಕ 8:15-9:00:ವರೆಗೆ ವಾಣಿಯ ಗಾಣಿಗ ಮಹಿಳಾ ಭಜನಾ ಮಂಡಳಿ ವಿಟ್ಲ ಇವರಿಂದ ’ಭಜನಾ ಸಂಕೀರ್ತನೆ’ ನಡೆಯಲಿದೆ. 9:00-10:00 ವರೆಗೆ ಸಮುದಾಯ ಮಕ್ಕಳು ಮತ್ತು ಹಿರಿಯರಿಂದ ಸಾಂಸ್ಕೃತಿಕ ’ನೃತ್ಯ ವೈವಿಧ್ಯ’ ನಡೆಯಲಿದೆ. 10:00-11:00 : ಧಾರ್ಮಿಕ ಚಿಂತನೆ ನಡೆಯಲಿದೆ. ಕೋಮರ ಅಚ್ಚನ್ಮಾರರು, ಚೆಟ್ಟಿಯಾನ್, ಜಂಡಡ್ಕ, ಬೆಳ್ಚಪಾಡ್ಚನ್, ಪಟ್ಟಿಕಾರರು ವಿಟ್ಲ ಗೌರವ ಉಪಸ್ಥಿತರಿರುವರು. ಚಿಂತಕರು : ಶ್ರೀ ರಮೇಶ್ ಯಂ.ಕೆ. ಚೆಟ್ಟಿಯಾನ್ ಶ್ರೀ ಪೆರ್ಣೆ ಮುಚ್ಚಿಲೋಟು ಭಗವತೀ ಕ್ಷೇತ್ರ

11:30 – 1:30 : ಸನ್ಮಾನ – ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. ಅಪರಾಹ್ನ 1:30 : ಭೋಜನ ನಡೆದು ಬಳಿಕ 2:30 – 5:00ವರೆಗೆ ಯಕ್ಷಲೋಕದ ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರಸಂಗ ’ಗಜೇಂದ್ರ ಮೋಕ್ಷ’ ನಡೆಯಲಿದೆ.

ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ ವಿದ್ಯಾನಿಧಿ ವಿತರಣೆ ಮಾಡಲಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ , ಕರ್ನಾಟಕ ಶಾಸಕವಿಧಾನ ಪರಿಷತ್ ಕಿಶೋರ್ ಕುಮಾರ್ ಬೊಟ್ಯಾಡಿ,ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವ ಮಣಿಯಾಣಿ ಬಹುಮಾನ ವಿತರಿಸಲಿದ್ದಾರೆ.

ವಾಣಿಯನ್ ಗಾಣಿಗ ಸಮುದಾಯ ಸೇವಾ ಸಂಘ (ರಿ) ವಿಟ್ಲ ಅಧ್ಯಕ್ಷ ಉದಯಕುಮಾರ್ ದಂಬೆ ಇವರ ಅಧ್ಯಕಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರ ಮಾನವ ಹಕ್ಕುಗಳ ಆಯೋಗ ಬೆಂಗಳೂರು ಅಧ್ಯಕ್ಷ ಟಿ. ಶ್ಯಾಂ ಭಟ್ ,ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ದುಬೈ ಉದ್ಯಮಿ ಶಿವಶಂಕರ ನೆಕ್ರಾಜೆ, ದ.ಕ. ಜಿಲ್ಲಾ ಗಾಣಿಗ ಸಮಾಜಸೇವಾ ಸಂಘ (ರಿ) ಮಂಗಳೂರು ಅಧ್ಯಕ್ಷ ಕೆ. ರಾಮ ಮುಗೋಡಿ, ಬೆಂಗಳೂರು ಸಾಫ್ಟ್‌ವೇರ್, ಸ್ವಿಗ್ಗಿ ನಿರ್ದೇಶಕ ಪ್ರೀತಂ ಕೆ.ಎಸ್, ಉದ್ಯಮಿಗಳು, ಶ್ರೀಕೃಷ್ಣ ಹಾರ್ಡ್‌ ವೇರ್ ಕಾಸರಗೋಡು ಸುರೇಶ್ ಕಾಸರಗೋಡು, ಬೆಂಗಳೂರು ಪೋಲೀಸ್ ನಿರೀಕ್ಷಕ ಪ್ರಕಾಶ್, ಆರ್‌ಎಫ್‌ಒ ಪುತ್ತೂರು ಕಿರಣ್ ಬಿ.ಎಂ, ಪುತ್ತೂರು ಬಣ್ಣರ ಮಹಾಲಿಂಗ ಯಕ್ಷ ಪ್ರತಿಷ್ಠಾನ (ರಿ) ಅಧ್ಯಕ್ಷ ಗೋಪಾಲ ಮಾಸ್ಟರ್ ಪಂಜತ್ತೊಟ್ಟಿ, ಪೆರ್ಣೆ ವಾಣಿಯ ಗಾಣಿಗ ಸಮಾಜ ಸೇವಾ ಸಂಘ (ರಿ.) ಅಧ್ಯಕ್ಷ ಜಯಂತ ಪಾಟಾಳಿ, ವಾಣಿಯ ಗಾಣಿಗ ಸಭಾ ಕಾಸರಗೋಡು ಜಿಲ್ಲಾಧ್ಯಕ್ಷ ಎಸ್‌‌.ಬಿ. ನಾರಾಯಣ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಅಡೂರು ವಾಣಿಯ ಗಾಣಿಗ ಸಭಾ ಅಧ್ಯಕ್ಷೆ ಶ್ರೀಮತಿ ಸುಶೀಲಾ, ಬದಿಯಡ್ಕ ವಾಣಿಯ ಗಾಣಿಗ ಸಭಾ ಅಧ್ಯಕ್ಷ ಭಾಸ್ಕರ ಪಿಲಂಕಟ್ಟ, ಮುಳ್ಳೇರಿಯ ವಾಣಿಯ ಗಾಣಿಗ ಸಭಾ ಧ್ಯಕ್ಷ ರಾಮಚಂದ್ರ ಬೆಳ್ಳಿಗೆ, ನೆಲ್ಲಿಕಟ್ಟೆ ವಾಣಿಯ ಗಾಣಿಗ ಸಭಾ ಅಧ್ಯಕ್ಷ ಅಂಬಾಡಿ ನರಿಕಡ್ಪು, ಪೆರ್ಲ ವಾಣಿಯ ಗಾಣಿಗ ಸಭಾ ಅಧ್ಯಕ್ಷ ಗೋಪಾಲ ಸೂರ್ಡೇಲು, ಸೀತಾಂಗೋಳಿ ವಾಣಿಯ ಗಾಣಿಗ ಸಭಾ ಅಧ್ಯಕ್ಷ ಮಹಾಲಿಂಗ ಪೆರ್ಣೆ, ಪೆರ್ಮುದೆ ವಾಣಿಯ ಗಾಣಿಗ ಸಭಾ ಅಧ್ಯಕ್ಷ ರಘು ಕಲ್ಕಾರ್‌, ಕುಂಬಳೆ ವಾಣಿಯ ಗಾಣಿಗ ಸಭಾ ಅಧ್ಯಕ್ಷ ಕೆ.ಸಿ. ಮೋಹನ, ಕಾಸರಗೋಡು ವಾಣಿಯ ಗಾಣಿಗ ಸಭಾ ಅಧ್ಯಕ್ಷ ಸುರೇಶ್ ಬಟ್ಟಂಪಾರ, ಕಾಸರಗೋಡು ನಗರ ವಾಣಿಯ ಗಾಣಿಗ ಸಭಾ ಅಧ್ಯಕ್ಷ ಶಂಕರ್ ಜೆ.ಪಿ ನಗರ, ಮಧೂರು ವಾಣಿಯ ಗಾಣಿಗ ಸಭಾ ಅಧ್ಯಕ್ಷ ಬಾಲಕೃಷ್ಣ, ಬಾರಿಕ್ಕಾಡ್ ವಾಣಿಯ ಸಮಾಜ ಸಂಘ (ರಿ) ಕಾಸರಗೋಡು ಅಧ್ಯಕ್ಷ ಬಾಲಕೃಷ್ಣ ಬಾರಿಕ್ಕಾಡ್, ಬಣ್ಣರ ಮಹಾಲಿಂಗ ಯಕ್ಷ ಪ್ರತಿಷ್ಠಾನ (ರಿ) ಪುತ್ತೂರು ಬಣ್ಣರ ಮಹಾಲಿಂಗ ಯಕ್ಷ ಪ್ರತಿಷ್ಠಾನ (ರಿ) ಪುತ್ತೂರು ನಾರಾಯಣ ಪಾಟಾಳಿ ದೇಲಂಪಾಡಿ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು.

- Advertisement -

Related news

error: Content is protected !!