Wednesday, June 24, 2026
spot_imgspot_img
spot_imgspot_img

ಐಪಿಎಲ್‌ ಟ್ರೋಫಿ ಗೆದ್ದ ಆರ್‌ಸಿಬಿಗೆ ಸಿಕ್ಕ ಬಹುಮಾನ ಎಷ್ಟು..?

- Advertisement -
- Advertisement -

ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌…

18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಚೊಚ್ಚಲ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಐಪಿಎಲ್‌ ಟ್ರೋಫಿ ಗೆದ್ದ ತಂಡಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿ ಬಹುಮಾನ ಬಾಚಿಕೊಂಡಿದೆ. ಮೊದಲ ಐಪಿಎಲ್‌ನಲ್ಲಿ ಗೆದ್ದ ತಂಡಕ್ಕೆ 4.8 ಕೋಟಿ ರೂಪಾಯಿ ಸಿಗುತ್ತಿತ್ತು. ಅದು ಈಗ 20 ಕೋಟಿ ರೂಪಾಯಿಗೆ ಬಂದು ನಿಂತಿದೆ.

ಐಪಿಎಲ್ 2025 ಟ್ರೋಫಿ ಗೆದ್ದ ನಂತರ, ಆರ್‌ಸಿಬಿಗೆ ಬಹುಮಾನದ ಮೊತ್ತವಾಗಿ ಬರೋಬ್ಬರಿ 20 ಕೋಟಿ ರೂ. ಸಿಗಲಿದೆ. ಮತ್ತೊಂದೆಡೆ, ರನ್ನರ್ ಅಪ್ ಪಂಜಾಬ್ ಕಿಂಗ್ಸ್ ತಂಡಕ್ಕೂ 13 ಕೋಟಿ ರೂ.ಗಳು ಬಹುಮಾನವಾಗಿ ಸಿಗಲಿದೆ. ಕ್ಯಾಲಿಫೈಯರ್ ಆಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ 7 ಕೋಟಿ ರೂ. ಎಲಿಮಿನೇಟರ್ ಆಡಿದ ಗುಜರಾತ್ ಟೈಟನ್ಸ್ ತಂಡಕ್ಕೆ 6.5 ಕೋಟಿ ರೂ. ಬಹುಮಾನ ಸಿಕ್ಕಿದೆ. ಈ ಮಧ್ಯೆ ಕೆಲವರು ವೈಯಕ್ತಿಕ ಪ್ರಶ್ತಿಗಳನ್ನೂ ಬಾಚಿಕೊಂಡಿದ್ದಾರೆ. ಅವುಗಳ ಪಟ್ಟಿ ಇಲ್ಲಿವೆ:

ಪ್ರಶಸ್ತಿ ವಿಜೇತರು ಮತ್ತು ಬಹುಮಾನ ಪಡೆದ ಲಿಸ್ಟ್‌ ಇಲ್ಲಿದೆ..

ಚಾಂಪಿಯನ್ಸ್‌ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 20 ಕೋಟಿ ರೂ.
ರನ್ನರ್ಸ್ ಅಪ್ – ಪಂಜಾಬ್ ಕಿಂಗ್ಸ್ – 12.5 ಕೋಟಿ ರೂ.
ಆರೆಂಜ್ ಕ್ಯಾಪ್ – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಪರ್ಪಲ್ ಕ್ಯಾಪ್ – ಪ್ರಸಿದ್ಧ್ ಕೃಷ್ಣ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಮೋಸ್ಟ್‌ ವ್ಯಾಲ್ಯುಯೆಬಲ್‌ ಪ್ಲೇಯರ್‌ – ಸೂರ್ಯಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್) – 15 ಲಕ್ಷ ರೂ.
ಆವೃತ್ತಿಯ ಸೂಪರ್ ಸ್ಟ್ರೈಕರ್ – ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – 10 ಲಕ್ಷ ರೂ. + ಟಾಟಾ ಕರ್ವ್
ಹೆಚ್ಚಿನ ಡಾಟ್ ಬಾಲ್ – ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಉದಯೋನ್ಮುಖ ಆಟಗಾರ (ಎಮರ್ಜಿಂಗ್‌ ಪ್ಲೇಯರ್‌) – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಫ್ಯಾಂಟಸಿ ಕಿಂಗ್ – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಸೂಪರ್ ಸಿಕ್ಸರ್ಸ್‌ – ನಿಕೋಲಸ್ ಪೂರನ್ (ಲಕ್ನೋ ಸೂಪರ್ ಜೈಂಟ್ಸ್) – 10 ಲಕ್ಷ ರೂ.
ಸಿರೀಸ್‌ನಲ್ಲಿ ಅತಿಹೆಚ್ಚು ಫೋರ್ಸ್‌ – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಕ್ಯಾಚ್‌ ಆಫ್‌ ದಿ ಸೀಸನ್‌ – ಕಮಿಂಡು ಮೆಂಡಿಸ್ (ಸನ್‌ರೈಸರ್ಸ್ ಹೈದರಾಬಾದ್) – 10 ಲಕ್ಷ ರೂ.
ಫೇರ್‌ಪ್ಲೇ ಪ್ರಶಸ್ತಿ – ಚೆನ್ನೈ ಸೂಪರ್ ಕಿಂಗ್ಸ್ – 10 ಲಕ್ಷ ರೂ.
ಪಿಚ್ ಮತ್ತು ಗ್ರೌಂಡ್ – ಡಿಡಿಸಿಎ (ಡೆಲ್ಲಿ ಕ್ಯಾಪಿಟಲ್ಸ್‌ ಹೋಮ್ ಗ್ರೌಂಡ್) – 50 ಲಕ್ಷ ರೂ.

ಆರ್‌ಸಿಬಿ vs ಪಂಜಾಬ್‌ ಫೈನಲ್‌ನಲ್ಲಿ ಪ್ರಶಸ್ತಿ ಗೆದ್ದವರು ಇವರೇ…
ಪಂದ್ಯ ಶ್ರೇಷ್ಠ ಪ್ರಶಸ್ತಿ – ಕೃನಾಲ್ ಪಾಂಡ್ಯ (ರಾಯಲ್ ಚಾಲೆಂಜರ್ಸ್ ಬೆಂಗಳೂರು) – 5 ಲಕ್ಷ ರೂ.
ಸೂಪರ್ ಸ್ಟ್ರೈಕರ್ – ಜಿತೇಶ್ ಶರ್ಮಾ – 1 ಲಕ್ಷ ರೂ.
ಅತಿ ಹೆಚ್ಚು ಡಾಟ್ ಬಾಲ್ಸ್‌ – ಕೃನಾಲ್ ಪಾಂಡ್ಯ – 1 ಲಕ್ಷ ರೂ.
ಅತಿ ಹೆಚ್ಚು ಫೋರ್‌ಗಳು – ಪ್ರಿಯಾಂಶ್ ಆರ್ಯ – 1 ಲಕ್ಷ ರೂ.
ಫ್ಯಾಂಟಸಿ ಕಿಂಗ್ – ಶಶಾಂಕ್ ಸಿಂಗ್ – 1 ಲಕ್ಷ ರೂ.
ಅತಿ ಹೆಚ್ಚು ಸಿಕ್ಸರ್ಸ್‌ – ಶಶಾಂಕ್ ಸಿಂಗ್ – 1 ಲಕ್ಷ ರೂ.

- Advertisement -

Related news

error: Content is protected !!