Sunday, June 21, 2026
spot_imgspot_img
spot_imgspot_img

ಪುತ್ತೂರು: ಭಾರತೀಯ ಇಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ `ಸಿಂಪಲ್ ಎನರ್ಜಿ’ ಶೋರೂಂ ಶುಭಾರಂಭ

- Advertisement -
- Advertisement -

ಪುತ್ತೂರು: ಭಾರತದಲ್ಲಿ ಈಗ ಇಲೆಕ್ಟ್ರಿಕ್ ವಾಹನಗಳ ಯುಗ. ಈ ಕ್ಷೇತ್ರದಲ್ಲಿ ನಿತ್ಯ ನಿರಂತರ ಸಂಶೋಧನೆಗಳು ನಡೆಯುತ್ತಿದ್ದು, ಗ್ರಾಹಕರ ಬೇಡಿಕೆ, ಅವಶ್ಯಕತೆಗೆ ಪೂರಕವಾದ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಈ ಪೈಕಿ ಇದೀಗ ಭಾರತದ ಇಲೆಕ್ಟ್ರಿಕ್ ಸ್ಕೂಟರ್‌ಗಳ ಇತಿಹಾಸದಲ್ಲೇ ಅತ್ಯಧಿಕ ರೇಂಜ್ ಅಂದರೆ ಫುಲ್‍ಚಾರ್ಜ್‍ಗೆ 248 ಕಿ.ಮೀ.ಗಳವರೆಗೆ ಸಾಗಬಲ್ಲ ಸ್ಕೂಟರ್ ಇದೀಗ ಪುತ್ತೂರಿಗೂ ಬಂದಿದೆ. ಭಾರತೀಯ ಇಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಸಿಂಪಲ್ ಎನರ್ಜಿ' ಸಂಸ್ಥೆಯ ಸ್ಕೂಟರ್‌ನ್ನು ಗ್ರಾಹಕರು ಇನ್ನು ಮುಂದೆ ಪುತ್ತೂರಿನಲ್ಲೇ ಖರೀದಿಸಬಹುದು. ವಿತರಕರಾದಈಶ್ ಉದ್ಯೋಗ್ ಪ್ರೈವೇಟ್ ಲಿಮಿಟೆಡ್‍ನ ಸಿಂಪಲ್ ಎನರ್ಜಿ' ಪುತ್ತೂರು ಶೋರೂಂ ಕೃಷ್ಣ ಕಿಶೋರ್ ಎನ್‌.ಟಿ ಹಾಗೂ ಕೀರ್ತಿ ಅಖಿಲೇಶ್ ಇವರ ಮಾಲಕತ್ವದಲ್ಲಿ ಎಪಿಎಂಸಿ ರಸ್ತೆಯಲ್ಲಿರುವತ್ರಿನೇತ್ರ ಕಾಂಪ್ಲೆಕ್ಸ್’ನಲ್ಲಿ ಶುಭಾರಂಭಗೊಂಡಿದೆ.

ಕಾರ್ಯಕ್ರಮವನ್ನು ಸಾಗರ್ ನಾಯಕ್, ಕೃಷ್ಣ ಕಿಶೋರ್ ಎನ್‌.ಟಿ ಮತ್ತು ರಾಜಗೋಪಾಲ್ ಎನ್‌.ಟಿ, ಅರುಣಾ ಕಿಶೋರ್ ಮತ್ತು ಕೀರ್ತಿ ಅಖಿಲೇಶ್ ಮತ್ತು ಕ್ರಿಶಾ, ಅರ್ಜು‌ನ್‌ ಕಾಮತ್‌ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಎಂ.ಎಸ್. ಭಟ್,ಬಂಗಾರ್ಕ ರಾಮ್ ಭಟ್ ಹಲವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಿಂಪಲ್ ವನ್ ಮತ್ತು ಸಿಂಪಲ್ 1ಎಸ್ ಎನ್ನುವ ಎರಡು ಮಾದರಿಯ ವಾಹನಗಳನ್ನು ಸಂಸ್ಥೆಯು ಪರಿಚಯಿಸಿದ್ದು, ಸಿಂಪಲ್ ವನ್ ಮಾದರಿಯ ಸ್ಕೂಟರ್ 248 ಕಿಮೀ ಐಡಿಸಿ ರೇಂಜ್ ಹೊಂದಿದೆ. ವಾಹನದ ಮೋಟಾರ್ ಮತ್ತು ಬ್ಯಾಟರಿ ಮೇಲೆ 8 ವರ್ಷಗಳ ವ್ಯಾರಂಟಿಯನ್ನು ಕೂಡ ನೀಡಲಾಗುತ್ತಿದೆ.

2.77 ಸೆಕೆಂಡ್‍ಗಳಲ್ಲಿ 0-40 ಕಿಮೀವರೆಗಿನ ವೇಗವನ್ನು ಪಡೆದುಕೊಳ್ಳುವ ಸಾಮಥ್ರ್ಯವಿದೆ. ರೈಡಿಂಗ್‍ನಲ್ಲಿ ಇಕೋ, ರೈಡ್, ಡ್ಯಾಶ್, ಸೋನಿಕ್ ಎನ್ನುವ ನಾಲ್ಕು ಮೋಡ್‍ಗಳಿದ್ದು, ಗಂಟೆಗೆ 105 ಕಿ.ಮೀ. ಗರಿಷ್ಠ ವೇಗದಲ್ಲಿ ಸಂಚರಿಸಬಹುದು. ಇಕೋ ಮೋಡ್‍ನಲ್ಲಿ ಕೂಡ ಗಂಟೆಗೆ 56 ಕಿಮೀ ವೇಗದಲ್ಲಿ ಸಾಗುತ್ತದೆ. ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಹೊಂದಿರುವ ಸಿಂಪಲ್ ವನ್‍ನ ಮಾರುಕಟ್ಟೆ ಬೆಲೆ 1,59,999/- ರೂ.ಗಳು.ಸಿಂಪಲ್ 1ಎಸ್ ಎನ್ನುವುದು ಇನ್ನೊಂದು ಮಾದರಿಯ ಸ್ಕೂಟರ್ ಆಗಿದ್ದು, ಇದರ ರೇಂಜ್ 180 ಕಿ.ಮೀಗಳು. ವಾಹನದ ಮೋಟಾರ್ ಮತ್ತು ಬ್ಯಾಟರಿ ಮೇಲೆ 8 ವರ್ಷಗಳ ವ್ಯಾರಂಟಿಯನ್ನು ಕೂಡ ನೀಡಲಾಗುತ್ತಿದೆ.

ಈ ಸ್ಕೂಟರ್‌ನ್ನು ಬೆಲೆ 1,39,999/ ರೂ.ಗಳು. ಎರಡೂ ವಾಹನಗಳ ನಿರ್ವಹಣಾ ವೆಚ್ಚವು ಬಹಳ ಕಡಿಮೆಯಿದ್ದು, 5000 ಕಿ.ಮೀಗಳು ಅಥವಾ 60 ದಿನಗಳು ಇವೆರಡರ ನಡುವೆ ಸರ್ವೀಸ್ ಮಾಡಿಸಿಕೊಂಡರೆ ಸಾಕು. ಇಲೆಕ್ಟರಿಕ್ ವಾಹನಗಳನ್ನು ಖರೀದಿಸಬಯಸುವವರಿಗೆ ಸಂಸ್ಥೆಯು ವಿಶೇಷ ಅವಕಾಶಗಳನ್ನು ಕೂಡ ಒದಗಿಸಿದೆ. 6.99%, 7.99% ದರದಲ್ಲಿ ಸಾಲ ಸೌಲಭ್ಯವೂ ಲಭ್ಯವಿದೆ. ಕೇವಲ 25-30,000/- ರೂ.ಗಳ ಕಡಿಮೆ ಡೌನ್‍ಪೇಮೆಂಟ್‍ನಲ್ಲಿ ವಾಹನವನ್ನು ತಮ್ಮದಾಗಿಸಿಕೊಳ್ಳಬಹುದು. ಅಲ್ಲದೆ, ತಮ್ಮ ಯಾವುದೇ ದ್ವಿಚಕ್ರ ವಾಹನವನ್ನು ಸಿಂಪಲ್ ವನ್‍ನೊಂದಿಗೆ ಎಕ್ಸ್‍ಚೇಂಜ್ ಕೂಡ ಮಾಡಿಕೊಳ್ಳಬಹುದು.

ಇಂದೇ ಭೇಟಿ ನೀಡಿ..
9606590399

- Advertisement -

Related news

error: Content is protected !!