




ಉಡುಪಿ: ನಗರದ ಸಮೀಪ ಮಹಿಳೆಯೊಬ್ಬರಿಗೆ ಆನ್ ಲೈನ್ ಶಾಪಿಂಗ್ ಹೆಸರಿನಲ್ಲಿ ಕರೆ ಮಾಡಿ ಸಾವಿರಾರು ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.
ವಂಚನೆಗೊಳಾಗದ ಮಹಿಳೆ ಜಹೀನ್ ಆಯೇಶಾ ಜಾಕೀರ್ ಎಂದು ತಿಳಿದು ಬಂದಿದೆ.ಜಹೀನ್ ಆಯೇಶಾ ಜಾಕೀರ್(27) ಇವರು ದಿನಾಂಕ 21/08/2025 ರಂದು ಸಂಜೆ 4:30 ಗಂಟೆಗೆ ಮನೆಯಲ್ಲಿರುವಾಗ ಯಾರೋ ಅಪರಿಚಿತ ವ್ಯಕ್ತಿಯು ಫೋನ್ ಕರೆ ಮಾಡಿ ತಾನು ನೈಕಾ ಎಂಬ ಆನ್ ಲೈನ್ ಶಾಪಿಂಗ್ ಕಂಪನಿಯಿಂದ ಮಾತನಾಡುತ್ತಿದ್ದು, ನೀವು ಪಿನ್ ಕೋಡ್ ನಂಬರ್ ನ್ನು ಸರಿಯಾಗಿ ನಮೂದಿಸದೇ ಇರುವುದರಿಂದ ನಿಮ್ಮ ಆರ್ಡರ್ ಸ್ಥಗಿತಗೊಂಡಿದೆ ಅದನ್ನು ಚಾಲ್ತಿಗೊಳಿಸಬೇಕಾದರೆ ನೀವು ಮೊದಲು ಹಣವನ್ನು ಪಾವತಿಸಬೇಕು ನಂತರ ಆ ಹಣ ನಿಮಗೆ ಮರುಪಾವತಿ ಆಗುತ್ತದೆ ಎಂದು ಹೇಳಿದ್ದು, ಅಪರಿಚಿತ ವ್ಯಕ್ತಿಯ ಮಾತುಗಳನ್ನು ನಂಬಿದ ಅಪರಿಚಿತ ವ್ಯಕ್ತಿಯು ನೀಡಿದ ಬ್ಯಾಂಕ್ ಖಾತೆಗೆ ಒಟ್ಟಾರೆಯಾಗಿ 47,191.50/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದು, ನಂತರ ಆರೋಪಿಯು ಯಾವುದೇ ಹಣವನ್ನು ಮರುಪಾವತಿ ಮಾಡದೇ ಇದ್ದು, ತಾನು ಸೈಬರ್ ವಂಚನೆಗೊಳಗಾದ ವಿಚಾರ ತಿಳಿದುಬಂದಿದ್ದು, ಆರೋಪಿಯು ತಾನು ನೈಕಾ ಕಂಪನಿಯ ವ್ಯಕ್ತಿ ಎಂದು ಹೇಳಿ 47,191.50/- ರೂಪಾಯಿ ಹಣವನ್ನು ಆನ್ ಲೈನ್ ಮೂಲಕ ವಂಚನೆ ಮಾಡಿರುವುದಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 158/2025 ಕಲಂ: 318(4) BNS 66(D) IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.








