Wednesday, June 24, 2026
spot_imgspot_img
spot_imgspot_img

ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

- Advertisement -
- Advertisement -

ವಿದ್ಯಾರ್ಥಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.26 ರಂದು ಮುಂಜಾನೆ ಐವರ್ನಾಡಿನಲ್ಲಿ ನಡೆದಿದೆ.ದರ್ಕಾಸ್ ರಬ್ಬರ್ ಫ್ಯಾಕ್ಟರಿ ಬಳಿಯ ನಿವಾಸಿ ವಿಜಯಕಾಂತ ಎಂಬವರ ಪುತ್ರ ಕೌಶಿಕ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ.

ತನ್ನ ಮನೆಯ ಸಮೀಪದ ಸಾರ್ವಜನಿಕ ಬಾವಿಗೆ ಕೌಶಿಕ್ ಕುಮಾರ್ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪೈಚಾರಿನ ಮುಳುಗು ತಜ್ಞರು ಬಂದು ಬಾವಿಯಿಂದ ಮೃತದೇಹವನ್ನು ಮೇಲೆತ್ತಿದ್ದಾರೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಕೌಶಿಕ್ ಸುಳ್ಯದ ಸೈಂಟ್ ಜೋಸೇಫ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿ.

- Advertisement -

Related news

error: Content is protected !!