- Advertisement -
- Advertisement -



ಮಂಗಳೂರು: ಮಾರ್ಗದೀಪ ಸಾಂಸ್ಕೃತಿಕ ಸಮಿತಿ ದುಬೈ ಯುಎಇ ವತಿಯಿಂದ ನಡೆದ 11 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕರಾವಳಿಯ ಖ್ಯಾತ ಗಾಯಕಿ ಕು. ದಿವ್ಯನಿಧಿ ರೈಯವರಿಂದ “ಸ್ವರ-ಸಮರ್ಪಣೆ” ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕು. ದಿವ್ಯನಿಧಿ ರೈ ಎರುಂಬುರವರಿಗೆ “ಸಂಗೀತ ಯಕ್ಷನಾಟ್ಯ ಭೂಷಣ” ಬಿರುದು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್,ಉದ್ಯಮಿ ಡಾ. ಬಿ. ಆರ್. ಶೆಟ್ಟಿ ಅಬುಧಾಬಿ, ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಮೂಡಬಿದ್ರೆ ಶಾಸಕ ಉಮನಾಥ್ ಕೋಟ್ಯಾನ್, ಉದ್ಯಮಿ ರಾಘವೇಂದ್ರ ಕುಡ್ವ, ಮಾರ್ಗದೀಪ ಸಮಿತಿಯ ಅಧ್ಯಕ್ಷ ಮಹೇಶ್ ಚಂದ್ರಗಿರಿ, ಉಪಾಧ್ಯಕ್ಷ ಪ್ರವೀಣ್ ಉಳ್ಳೂರು, ಜೊತೆ ಕಾರ್ಯದರ್ಶಿ ಬಿಪಿನ್ ಚಂದ್ರ ನಾಯಕ್, ಕೋಶಾಧಿಕಾರಿ ರಾಜೇಶ್ ರಾವ್, ಕಾರ್ಯಕ್ರಮದ ಸಂಚಾಲಕ ಸುಗಂಧರಾಜ ಬೇಕಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
- Advertisement -








