



ಅಳಕೆಮಜಲು: ಶ್ರೀ ಶಾರದಾಂಬ ಭಜನಾ ಮಂಡಳಿ (ರಿ) ಅಶೋಕನಗರ 43ನೇ ವರ್ಷದ ನವರಾತ್ರಿ ಉತ್ಸವ ಮತ್ತು ಶಾರದೋತ್ಸವವು 22-9-2025ನೇ ಸೋಮವಾರದಿಂದ ರಿಂದ 1-10-2025ನೇ ಬುಧವಾರದವರೆಗೆ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನಡೆಯಲಿದೆ.
ದಿನಾಂಕ:22-09-2025ನೇ ರಾತ್ರಿ 7.30 ರಿಂದ 8.30 ವರೆಗೆ ಸೋಮವಾರ ಶ್ರೀ ಶಾರದಾಂಬ ಭಜನಾ ಮಂಡಳಿ ಮತ್ತು ಶ್ರೀ ಶಾರದಾಂಬ ಮಹಿಳಾ ಸಮಿತಿ, ಅಶೋಕನಗರ ಇವರಿಂದ ಭಜನೆ ನಡೆಯಲಿದೆ.
ದಿನಾಂಕ:23-09-2025ನೇ ಮಂಗಳವಾರ 7.30 ರಿಂದ 8.30 ವರೆಗೆ ಶ್ರೀ ಜಯದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಧರ್ಮನಗರ ಇವರಿಂದ ಭಜನೆ ನಡೆಯಲಿದೆ.
ದಿನಾಂಕ:24-09-2025 ಬುಧವಾರ 7.30 ರಿಂದ 8.30 ವರೆಗೆ ಶ್ರೀಕೃಷ್ಣ ಭಜನಾ ಮಂಡಳಿ ಕರಿಮಜಲು ಇವರಿಂದ ಭಜನೆ ನಡೆಯಲಿದೆ.
ದಿನಾಂಕ 25-09-2025ನೇ ಗುರುವಾರ 7.30 ರಿಂದ 8.30 ವರೆಗೆ ಶ್ರೀ ಶಾರದಾಂಬ ಮಹಿಳಾ ಸಮಿತಿ, ಅಶೋಕನಗರ ಇವರಿಂದ ಭಜನೆ ನಡೆಯಲಿದೆ.
ದಿನಾಂಕ 26-09-2025ನೇ ಶುಕ್ರವಾರ 7.30 ರಿಂದ 8.30 ವೆರೆಗೆ ಷಣ್ಮುಖ ಸುಬ್ರಹ್ಮಣ್ಯ ಯುವಕ ಮಂಡಲ ಕೋಲ್ಪೆ ಇವರಿಂದ ಭಜನೆ ನಡೆಯಲಿದೆ.
ದಿನಾಂಕ 27-09-2025ನೇ ಶನಿವಾರ 7.30 ರಿಂದ 8.30 ವರೆಗೆ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಕುಂಡಡ್ಕ ಇವರಿಂದ ಭಜನೆ ನಡೆಯಲಿದೆ.
ದಿನಾಂಕ 28-09-2025ನೇ ಆದಿತ್ಯವಾರ ಬೆಳಗ್ಗೆ ಗಂಟೆ 11:00 ರಿಂದ ಆಟೋಟ ಸ್ಪರ್ಧೆಗಳು ನಡೆಯಲಿದೆ.
*5 ವರ್ಷದೊಳಗಿನ ಮಕ್ಕಳಿಗೆ ಸ್ಥಳದಲ್ಲೇ ಸೂಕ್ತ ಸ್ಪರ್ಧೆ ನಡೆಸಲಾಗುವುದು.

1 – 2 ನೇ ತರಗತಿ ಬಾಲಕ, ಬಾಲಕಿಯರಿಗೆ
*ಕಪ್ಪೆ ಜಿಗಿತ
*ಲಕ್ಕಿ ಗೇಮ್
*ಬಾಲ್ಡಿಗೆ ಚೆಂಡು ಹಾಕುವುದು.
3 – 4 ನೇ ತರಗತಿ ಬಾಲಕ, ಬಾಲಕಿಯರಿಗೆ
*ನಾಣ್ಯ ಹೆಕ್ಕುವುದು
*ಲಕ್ಕಿಗೇಮ್
*ಜ್ಞಾಪಕ ಶಕ್ತಿ
5 ರಿಂದ 7 ನೇ ತರಗತಿ ಬಾಲಕ, ಬಾಲಕಿಯರಿಗೆ
*ಜ್ಞಾಪಕ ಶಕ್ತಿ
*ಲಿಂಬೆ ಚಮಚ
*ಚಕ್ಕುಲಿ ತಿನ್ನುವ ಸ್ಪರ್ಧೆ
8 ರಿಂದ 10ನೇ ತರಗತಿ ಬಾಲಕರಿಗೆ
*ಜ್ಞಾಪಕ ಶಕ್ತಿ
*ದಂಡ ನಡಿಗೆ
*ಮೂರು ಕಾಲಿನ ಓಟ
8 ರಿಂದ 10ನೇ ತರಗತಿ ಬಾಲಕಿಯರಿಗೆ
*ಜ್ಞಾಪಕ ಶಕ್ತಿ
*ಬಲೂನ್ ನಡಿಗೆ (ಇಬ್ಬರ ತಂಡ)
*ಸಂಗೀತ ಕುರ್ಚಿ
ಯುವತಿಯರಿಗೆ, ಮಾತೆಯರಿಗೆ
*ಸಂಗೀತ ಕುರ್ಚಿ
*ನೋಟು-ಬಟ್ಟಲು,
*ತ್ರೋ-ಬಾಲ್
*ಮಡಕೆ ಒಡೆಯವುದು.
ಹಿರಿಯ ಮಾತೆಯರಿಗೆ
*ನಾಣ್ಯ ಹೆಕ್ಕುವುದು
*ಕ್ಯಾಂಡಲ್ ಉರಿಸುವುದು.
*ಬುಟ್ಟಿಗೆ ಬಲೂನು ಹಾಕುವುದು.
ಪುರುಷರಿಗೆ
*ಮಡಕೆ ಒಡೆಯುವುದು
ಪುರುಷರ ಗ್ರಾಮ ಮಟ್ಟದ ವಾಲಿಬಾಲ್ ಪಂದ್ಯಾಟ
(ಆಟಗಾರರು ಒಂದೇ ಗ್ರಾಮದವರಾಗಿರಬೇಕು. ಪ್ರವೇಶ ಶುಲ್ಕ: ರೂ.300/-)
*ಪ್ರಥಮ ಬಹುಮಾನ : ರೂ.2001 ನಗದು ಮತ್ತು ಶಾಶ್ವತ ಫಲಕ
*ದ್ವಿತೀಯ ಬಹುಮಾನ : ರೂ.1001 ನಗದು ಮತ್ತು ಶಾಶ್ವತ ಫಲಕ

ರಾತ್ರಿ 6.3.00 ರಿಂದ 7.30 ವರೆಗೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ವಿಷ್ಣುನಗರ ಕುಂಡಡ್ಕ ಇವರಿಂದ ಭಜನೆ ನಡಯಲಿದೆ.
ರಾತ್ರಿ ಗಂಟೆ 7.30ರಿಂದ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಲಿದೆ.
(ಈ ಕಾಠ್ಯಕ್ರಮವು ಸ್ಥಳೀಯ ಪ್ರತಿಭೆಗಳಿಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಉತ್ತಮವಾದ ವೇದಿಕೆಯಾಗಿದ್ದು ಸ್ಥಳೀಯರು ಪಾಲ್ಗೊಳ್ಳುವ ಅವಕಾಶ ಇದೆ.
*ಕಾಠ್ಯಕ್ರಮ ಸಮಯಾವಕಾಶ 5 ನಿಮಿಷ.
*ಹಾಡುಗಳ ಪೆನ್‌ಡ್ರೈವ್ ಮತ್ತು ವಿಷಯವನ್ನು ನೀಡಿ ಒಂದು ವಾರದ ಮೊದಲೇ ಹೆಸರು ನೊಂದಾಯಿಸಿದವರಿಗೆ ಮಾತ್ರ ಅವಕಾಶ
*ಒಬ್ಬರಿಗೆ ಒಂದೇ ನೃತ್ಯಕ್ಕೆ ಅವಕಾಶ.
*ಭಾಗವಹಿಸುವ ತಂಡಗಳು ಈ ನಂಬರಿಗೆ ವಾಟ್ಸಪ್ ಮಾಡುವ ಮೂಲಕ ಹೆಸರು ನೋಂದಾಯಿಸಬಹುದು : 9901727997, 8197500192
(ಭಾಗವಹಿಸಿದ ಎಲ್ಲಾ ತಂಡಗಳಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು.)
ಹಾಗೂ ಸಾರ್ವಜನಿಕರಿಗೆ ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ ಸ್ಪರ್ಧೆ ನಡೆಸಲಾಗುವುದು.
ದಿನಾಂಕ 29-09-2025ನೇ ಸೋಮವಾರ ಬೆಳಿಗ್ಗೆ 8.00ಕ್ಕೆ ಗಣಪತಿ ಹವನ ನಡೆದು 9.30ಕ್ಕೆ ಸಾನ್ವಿ ಕನ್‌ಸ್ಟ್ರಕ್ಷನ್ಸ್ ವಿಟ್ಲ ತಾರಾನಾಥ ಬೋಳಿಗದ್ದೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ 9.45 : ವೇ। ಮೂ| ಶ್ರೀಧರ ಭಟ್ ಕಬಕ ಇವರ ಪೌರೋಹಿತ್ಯದಲ್ಲಿ ಮೂರ್ತಿ ಪ್ರತಿಷ್ಠೆ ನೆರವೇರಲಿದೆ. ಶ್ರೀ ಶಾರದಾಂಬೆಗೆ ಬೆಳ್ಳಿ ಕಿರೀಟ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಪೂ. 11.00ರಿಂದ ಪೂಜಾ ಸೇವೆ ಪ್ರಾರಂಭವಾಗಲಿದೆ. ಮನೆ ತುಂಬಿಸಲು ತೆನೆ ವಿತರಣೆ. ಮಕ್ಕಳಿಗೆ ಅಕ್ಷರಭ್ಯಾಸ (ಬೆಳ್ಳಿಗೆ ಅಕ್ಕಿ ತರತಕ್ಕದ್ದು) ನಡೆಯಲಿದೆ. 11.30ರಿಂದ ಶ್ರೀ ನಾಗ ಪಂಚಶ್ರೀ ಕುಣಿತ ಭಜನಾ ಮಂಡಳಿ, ವಿದ್ಯಾಪುರ ಕಬಕ ಇವರಿಂದ ಭಜನೆ ನಡೆಯಲಿದೆ. ಮಧ್ಯಾಹ್ನ 1.00: ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.00 ರಿಂದ 7.00 ರಾಮಾರ್ಪಣಾ ಮಕ್ಕಳ ಭಜನಾ ತಂಡ, ಅಳಕೆಮಜಲು ಇವರಿಂದ ಭಜನೆ ನಡೆಯಲಿದೆ. ರಾತ್ರಿ 7.45 ರಂಗಪೂಜೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು 8.00ಕ್ಕೆ ಬಲೆ ತೆಲಿಪಾಲೆ, ಮಜಾಭಾರತ, v4 ಕಾಮಿಡಿ ಪ್ರೀಮಿಯರ್ ಲೀಗ್ ಚಾಂಪಿಯನ್ ಖ್ಯಾತಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುಸ್ಕೃತರು, ಚಲನಚಿತ್ರ ನಟ- ತೆಲಿಕೆದ ತೆನಾಲಿ- ಸುನೀಲ್ ನೆಲ್ಲಿಗದ್ದೆ ನೇತೃತ್ವದ ತೆಲಿಕೆದ ತೆನಾಲಿ ತಂಡ ಕಾರ್ಕಳ ಇವರಿಂದ ” ತೆಲಿಕೆದ ಬರ್ಸ comedy90″ ನಡೆಯಲಿದೆ.


ದಿನಾಂಕ:30-09-2025ನೇ ಮಂಗಳವಾರ ಬೆಳಿಗ್ಗೆ ಗಂಟೆ 9.30ರಿಂದ : ಪೂಜಾ ಸೇವೆ ಆರಂಭವಾಗಲಿದೆ. ಪ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯಾಟ ನಡೆಯಲಿದೆ. (ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ. ಪ್ರವೇಶ ಶುಲ್ಕ ರೂ. 200) ಬೆಳಿಗ್ಗೆ 10:30-11:30 ಶ್ರೀ ಮಹಾದೇವಿ ಮಹಿಳಾ ಭಜನಾ ಸಮಿತಿ ಕಬಕ ಇವರಿಂದ ಭಜನೆ ನಡೆಯಲಿದೆ. ಮಧ್ಯಾಹ್ನ 1.00 ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 6.00ರಿಂದ 7.00 ಶ್ರೀ ನಾಗಬ್ರಹ್ಮ ರಕೇಶ್ವರಿ ಭಜನಾ ಮಂಡಳಿ ಕಾಮಟ, ಮಂಗಿಲಪದವು ಇವರಿಂದ ಭಜನೆ ನಡೆದು ರಾತ್ರಿ 7.30 : ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ 7.30ಕ್ಕೆ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿದೆ. ಶಾರದಾಂಬ ಭಜನಾ ಮಂಡಳಿ ಅಧ್ಯಕ್ಷ ಕೃಷ್ಣ ಕಿಶೋರ್ ಭಟ್ ಪೆಲತ್ತಿಂಜ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ಮಹಾವಿದ್ಯಾಲಯ (ಸ್ವಾಯುತ್ತ) ಸ್ನಾತಕೋತ್ತರ ವಿಭಾಗ ಮುಖ್ಯಸ್ಥೆ ಡಾ| ವಿಜಯಸರಸ್ವತಿ ಬಿ. ಧಾರ್ಮಿಕ ಭಾಷಣ ಮಾಡಲಿದ್ದಾರೆ. ಪುತ್ತೂರು ದ್ವಾರಕಾ ಕಾರ್ಪೊರೇಶನ್ ಪ್ರೈವೇಟ್ ಲಿ. ಗೋಪಾಲಕೃಷ್ಣ ಭಟ್, ವಿದ್ಯಾಮಾತಾ ಅಕಾಡಮಿ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು ಗೌರವ ಉಪಸ್ಥತರಿರುವರು. ರಾತ್ರಿ 8.30 : ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಇವರಿಂದ ನೃತ್ಯವೈಭವ ನಡೆಯಲಿದೆ.

ದಿನಾಂಕ 01-10-2025ನೇ ಬುಧವಾರ ಬೆಳಿಗ್ಗೆ 9.30ರಿಂದ ಪೂಜಾ ಸೇವೆ ಆರಂಭವಾಗಲಿದೆ. ಬೆಳಿಗ್ಗೆ 10.00 ರಿಂದ 11.00 ಶ್ರೀ ಮಹಾದೇವಿ ಭಜನಾ ಮಂಡಳಿ ಅರ್ಕ ಇವರಿಂದ ಭಜನೆ ನಡೆಯಲಿದೆ.
ಮಧ್ಯಾಹ್ನ 11.00ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೊಸಮಾರು ಅಳಕೆಮಜಲು ನಿವೃತ್ತ ಅಧ್ಯಾಪಕಿ ಉಷಾ ಶೇಷಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಇಡ್ಕಿದು ಸೇವಾ ಸಹಕಾರಿ ಸಂಘ ನಿ. ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ ಎಸ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಮಧ್ಯಾಹ್ನ 12:30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ 3.00ಕ್ಕೆ ಮಹಾಮಂಗಳಾರತಿ ನಡೆಯಲಿದೆ.
ದಿಗ್ವಿಜಯೋತ್ಸವದಲ್ಲಿ ಶಾರದಾಂಬೆಯ ವಿದ್ಯುತ್ ಅಲಂಕೃತ ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಶ್ರೀ ದೇವಿ ಕುಣಿತ ಭಜನಾ ತಂಡ ಮುಡಿಪು ಇವರಿಂದ ಕುಣಿತ ಭಜನೆ ಮೆರುಗು ನೀಡಲಿದೆ.









