Wednesday, July 22, 2026
spot_imgspot_img
spot_imgspot_img

ನಂದಿನಿ ಸಿಹಿ ಉತ್ಪನ್ನಗಳ ಮಾರಾಟದಿಂದ 46 ಕೋಟಿ ವಾರ್ಷಿಕ ವಹಿವಾಟು

- Advertisement -
- Advertisement -

ಕರ್ನಾಟಕದಲ್ಲಿ ಕೆಎಂಎಫ್‌ ಉತ್ಪನ್ನಗಳಿಗೆ ಭಾರೀ ಬೇಡಿಕೆ ಬಂದಿದೆ. ಕರ್ನಾಟಕ ಹಾಲು ಮಹಾಮಂಡಳಿ (KMF) ಈ ವರ್ಷ ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ ತನ್ನ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.ಈ ಸೀಸನ್ ನಲ್ಲಿ 1100 ಟನ್ ಸಿಹಿತಿಂಡಿಗಳನ್ನು ಮಾರಾಟ ಮಾಡುವ ಮೂಲಕ 46 ಕೋಟಿ ರೂಪಾಯಿ ವಹಿವಾಟು ನಡೆಸಿದೆ ಎಂದು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.

ಇದು ಕೆಎಂಎಫ್ ಇತಿಹಾಸದಲ್ಲೇ ಹೊಸ ದಾಖಲೆ ಎಂದು ಹೇಳಲಾಗಿದೆ.ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಪ್ರತಿ ವರ್ಷ ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಸಿಹಿತಿಂಡಿಗಳಿಗೆ ಭಾರಿ ಬೇಡಿಕೆ ಇರುತ್ತದೆ. ಅದರಲ್ಲೂ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ 40ಕ್ಕೂ ಹೆಚ್ಚು ಬಗೆಯ ಸಿಹಿತಿಂಡಿಗಳನ್ನು ಮಾರಾಟ ಮಾಡಲು ಕೆಎಂಎಫ್ ಮೊದಲೇ ಪ್ಲಾನ್‌ ಮಾಡಿತ್ತು. 2023ರಲ್ಲೂ ದೀಪಾವಳಿ ಸಂದರ್ಭದಲ್ಲಿ 724 ಟನ್ ಸಿಹಿತಿಂಡಿಗಳು ಮಾರಾಟವಾಗಿದ್ದು, 33.48 ಕೋಟಿ ರೂಪಾಯಿ ವಹಿವಾಟು ನಡೆದಿತ್ತು.ಈ ಯಶಸ್ಸು ನಂದಿನಿ ಉತ್ಪನ್ನಗಳ ಶುದ್ಧತೆ, ಗುಣಮಟ್ಟ ಮತ್ತು ಗ್ರಾಹಕರ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಸಚಿವರು ಮಾಧ್ಯಮದೊಂದಿಗೆ ಬಣ್ಣಿಸಿದರು.

ಇನ್ನು ಕರ್ನಾಟಕದ ಹಾಲು ಉತ್ಪಾದಕರ ಸಮುದಾಯ ಮತ್ತು ಸಹಕಾರಿ ಒಕ್ಕೂಟದ ಬದ್ಧತೆ, ಶ್ರಮ ಮತ್ತು ಏಕತೆ ಹೇಗಿದೆ ಎಂಬುದನ್ನು ಇಲ್ಲಿ ವಿವರಿಸಿದರು. ಹಾಲು ಪೇಡ, ಧಾರವಾಡ ಪೇಡ, ಮೈಸೂರು ಪಾಕ್, ಬಾದಾಮ್ ಬರ್ಫಿ, ಕೊಕನಟ್‌ ಬರ್ಫಿ, ರಸಗುಲ್ಲಾ, ಕುಂದಾ ಸೇರಿದಂತೆ ಹಲವು ಸಿಹಿತಿಂಡಿಗಳು ನಂದಿನಿ ಮೂಲಕ ಜನಪ್ರಿಯವಾಗಿವೆ.

- Advertisement -

Related news

error: Content is protected !!