Tuesday, July 1, 2025
spot_imgspot_img
spot_imgspot_img

ವಿಟ್ಲ ಕುಮಾರವನ ಪ್ರೀಮಿಯರ್ ಲೀಗ್: ಗ್ರೂಪ್ ಸ್ಪೋರ್ಟ್ಸ್ ಕ್ಲಬ್ ವಿಟ್ಲ ಚಾಂಪಿಯನ್, ಶೈನ್ ಅಟೆಕ್ಕರ್ಸ್ ಕಡಂಬು ರನ್ನರ್ಸ್

- Advertisement -
- Advertisement -

ವಿಟ್ಲ: ವಿಟ್ಲ ಕುಮಾರವನ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ “ಡಿ ಗ್ರೂಪ್ ಸ್ಪೋರ್ಟ್ಸ್ ಕ್ಲಬ್ ವಿಟ್ಲ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದೆ. ಶೈನ್ ಅಟೆಕ್ಕರ್ಸ್ ಕಡಂಬು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಎಂಟು ತಂಡಗಳು ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿದೆ. ಅಂತಿಮವಾಗಿ ಶಾಫಿ ಎಂ ಎಸ್ ಡಿ, ನೌಫಲ್ ದುಬೈ ಅವರ ಮಾಲಕತ್ವದ ಡಿ ಗ್ರೂಪ್ ವಿಟ್ಲ ಮತ್ತು ಇಜ್ಜು ಕಡಂಬು ಅವರ ಮಾಲಕತ್ವದ ಅಟೆಕ್ಕರ್ಸ್ ಕಡಂಬು ತಂಡ ಫೈನಾಲ್ ಪ್ರವೇಶಿಸಿತು.

ಮೊದಲು ಬ್ಯಾಟ್ ಮಾಡಿದ ಡಿ ಗ್ರೂಪ್ ಸ್ಪೋರ್ಟ್ ಕ್ಲಬ್ ವಿಟ್ಲ ತಂಡ ಬಶೀರ್ ಅವರ ಸ್ಫೋಟಕ ಬ್ಯಾಟಿಂಗ್ ನಿಂದ 4 ಓವರ್ ನಲ್ಲಿ 43 ರನ್ ಗಳಿಸಿತ್ತು. ಅದನ್ನು ಬೆನ್ನೆತ್ತುವಲ್ಲಿ ಕಡಂಬು ತಂಡ ವಿಫಲವಾಗಿ ಸೋಲು ಅನುಭವಿಸಿದೆ.

ಅನ್ಸಾರ್ ಡಿ ಗ್ರೂಪ್ ಸರಣಿ ಶ್ರೇಷ್ಠ, ಬಶೀರ್ ಡಿ ಗ್ರೂಪ್ ಪಂದ್ಯ ಶ್ರೇಷ್ಠ, ಶೈನ್ ಕಡಂಬು ತಂಡದ ಸೈಜು ಉತ್ತಮ ವಿಕೆಟ್ ಕೀಪರ್ ಹಾಗೂ ನಿಶಾರ್ ಉತ್ತಮ ಬ್ಯಾಟ್ಸ್ಮೆನ್, ಆರ್ ಬಿ ಎಂ ತಂಡದ ತೌಸೀಪ್ ಉತ್ತಮ ಬೌಲರ್, ಸ್ಟ್ರೈಕರ್ 11 ತಂಡದ ರಾಝೀಕ್ ಉತ್ತಮ ಪೀಲ್ಡರ್ ಪ್ರಶಸ್ತಿ ಗೆ ಆಯ್ಕೆಗೊಂಡರು.

ಸಮಾರೋಪ ಸಮಾರಂಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್, ಜೈಶನ್, ಕಡಲ ಮುತ್ತು ಬಶೀರ್, ರೆಡ್ ಶಾಮಿಯಾನ ಮಾಲಕ ಮೊಹಮ್ಮದ್ ಇಕ್ಬಾಲ್ ಹಳೆಮನೆ, ಇಕ್ಬಾಲ್ ಬೊಬ್ಬೆಕೇರಿ, ಪತ್ರಕರ್ತ ಮಹಮ್ಮದ್ ಆಲಿ ವಿಟ್ಲ, ಆಯೋಜಕ ಜಗನ್ನಾಥ ಜಗ್ಗ ಉಪಸ್ಥಿತರಿದ್ದರು‌. ರಹಿಮಾನ್ ಬೊಬ್ಬೆಕೇರಿ ನಿರೂಪಿಸಿದರು.

- Advertisement -

Related news

error: Content is protected !!