- Advertisement -
- Advertisement -





ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಜಾತ್ರಾ ಮಹೋತ್ಸವ ಬಹಳ ವೈಭವದಿಂದ ನಡೆಯುತ್ತಿದ್ದು, ಈ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಗಿ ದಿನಾಂಕ 20ರಂದು ವಿಟ್ಲ ಸರಕಾರಿ ಮಾದರಿ ಶಾಲಾ ವಠಾರದಲ್ಲಿ VRC ವಿಟ್ಲ ಆಶ್ರಯದ ರಮನಾಥ ವಿಟ್ಲ ಸಾರಥ್ಯದಲ್ಲಿ 33 ನೇ ವರ್ಷದ ” ವಿಟ್ಲೋತ್ಸವ” ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ , ವಿ. ಮನೋಹರ್ ಸಾಹಿತಿ ಮತ್ತು ಸಂಗಿತ ನಿರ್ದೇಶಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಲಕ್ಷೀ ಗಾಣಿಗ ಈಜುಪಟು, ಚರಿತ ಅಮಿನ್ ಕೆ ಈಜುಪಟು, ತೀರ್ಥೆಶ್ ಕಬಡ್ಡಿಪಟು, ತರುಣ್ ಕೃಷ್ಣ ಜಿ.ಎಸ್
ಕಬಡ್ಡಿಪಟು, ಮೊಹಮ್ಮದ್ ಶಾಹಿಲ್ ಕಬಡ್ಡಿಪಟು ಪುರಸ್ಕ್ರತಗೊಳ್ಳುವರು.
ಸಂಜೆ 7 ಗಂಟೆಗೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರು ಅರ್ಪಿಸುವ ‘ಶಿವದೂತೆ ಗುಳಿಗೆ’ ನಾಟಕ ಖ್ಯಾತಿಯ ತಂಡದಿಂದ ‘ಛತ್ರಪತಿ ಶಿವಾಜಿ’ ನಾಟಕ ಪ್ರದರ್ಶನವು ನಡೆಯಲಿದೆ.
- Advertisement -








