Monday, September 7, 2026
spot_imgspot_img
spot_imgspot_img

ಇರಾನ್ ನ ಎರಡು ಶಾಲೆಗಳ ಮೇಲೆ ಇಸ್ರೇಲ್ ದಾಳಿ- ಮಕ್ಕಳ ಹತ್ಯೆ-ಮಕ್ಕಳ ಹಂತಕರಿಗೆ ಉತ್ತರಿಸದೇ ಬಿಡುವುದಿಲ್ಲ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್‌

- Advertisement -
- Advertisement -

ಅರಾಗ್ನಿಟೆಹ್ರಾನ್/ಮಿನಾಬ್: ದಕ್ಷಿಣ ಇರಾನ್ ನ ಹಾರ್ಮೋಙ್ಗನ್ ಪ್ರಾಂತ್ಯದ ಮಿನಾಬ್ ನಗರದಲ್ಲಿರುವ ಬಾಲಕಿಯರ ಪ್ರಾಥಮಿಕ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 108 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿ (IRNA) ವರದಿ ಮಾಡಿದೆ. ಇನ್ನೂ ಹೆಚ್ಚು ಮಂದಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿನಾಬ್‌ ನಗರದ ಅಧಿಕಾರಿ ಮೊಹಮ್ಮದ್ ರಾಹರ್ ಹೇಳುವಂತೆ, ಬೆಳಿಗ್ಗೆ ನಡೆದ ನೇರ ದಾಳಿಯ ವೇಳೆ ಶಾಲೆಯ ಆವರಣದಲ್ಲಿ ಸುಮಾರು 170 ವಿದ್ಯಾರ್ಥಿನಿಯರು ಇದ್ದರು. ದಾಳಿ ಸಂಭವಿಸಿದ ತಕ್ಷಣ ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು.

. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆಇದೇ ವೇಳೆ, ರಾಜಧಾನಿ ಟೆಹ್ರಾನ್ನ ಪೂರ್ವ ಭಾಗದಲ್ಲಿರುವ ಮತ್ತೊಂದು ಶಾಲೆಯ ಮೇಲೂ ಇಸ್ರೇಲ್ ದಾಳಿ ನಡೆಸಿದ್ದು, ಕನಿಷ್ಠ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಮೆಹರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.”ಬಾಲಕಿಯರ ಶಾಲೆಯ ಮೇಲಿನ ದಾಳಿಯು ನಾಗರಿಕರನ್ನೇ ಗುರಿಯಾಗಿಸಿ ಮಾಡಲಾಗಿದೆ. ಅಮೆರಿಕನ್ನರು ಮತ್ತು ಇಸ್ರೇಲಿಗಳು ತಮ್ಮ ದಾಳಿಯಲ್ಲಿ ಮಿಲಿಟರಿ ನೆಲೆಗಳನ್ನು ಮಾತ್ರ ಹೊಡೆಯುತ್ತಿದ್ದೇವೆ, ಇರಾನ್ ಜನರನ್ನು ಅಲ್ಲ, ಆಡಳಿತವನ್ನು ಶಿಕ್ಷಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಈಗ ನಾವು ನಾಗರಿಕ ಸಾವುನೋವುಗಳನ್ನು ನೋಡುತ್ತಿದ್ದೇವೆ, ಎಂದು Aljazeera ಟೆಹ್ರಾನ್ ನಿಂದ ವರದಿ ಮಾಡಿದೆಉತ್ತರಿಸದೆ ಬಿಡುವುದಿಲ್ಲ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ನಿ ಹೇಳಿದ್ದಾರೆ. IRNA ವರದಿ ಪ್ರಕಾರ, ಈ ದಾಳಿಯಲ್ಲಿ 108 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಮುಗ್ಧ ಮಕ್ಕಳು ಎಂದು ಅವರು ತಿಳಿಸಿದ್ದಾರೆ. ಇದು ಅತ್ಯಂತ ಪ್ರಬಲ ದಾಳಿಯಾಗಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಇರಾನ್ ಸರ್ಕಾರ ಹೇಳುತ್ತಿದೆ. ಜನರು ಬಯಸಿದರೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬಹುದು ಎಂದು ಭರವಸೆ ನೀಡಲಾಗಿದೆ. ನಿಬಂಧನೆಗಳು ಜಾರಿಯಲ್ಲಿವೆ; ಭಯಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಮೂಲವೊಂದು, ಇಸ್ರೇಲ್ ಮತ್ತು ಈ ಪ್ರದೇಶದಾದ್ಯಂತ ಅಮೆರಿಕದ ನೆಲೆಗಳು ಹಾಗೂ ಹಿತಾಸಕ್ತಿಗಳ ಮೇಲೆ ಇರಾನ್ ದಾಳಿಗಳು ಅಡೆತಡೆಯಿಲ್ಲದೆ ಮುಂದುವರಿಯುತ್ತವೆ ಎಂದು ಫಾರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದೆ

- Advertisement -

Related news

error: Content is protected !!