Thursday, July 23, 2026
spot_imgspot_img
spot_imgspot_img

ಬೆಳ್ತಂಗಡಿ: ಕಾರು–ಬೈಕ್ ಡಿಕ್ಕಿ; ಸವಾರನಿಗೆ ಗಾಯ

- Advertisement -
- Advertisement -

ಬೆಳ್ತಂಗಡಿ: ಕಾರು ಮತ್ತು ಮೋಟಾರ್ ಸೈಕಲ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಗಾಯಗೊಂಡ ಘಟನೆ ಬೆಳ್ತಂಗಡಿ ಧರ್ಮಸ್ಥಳ ಗ್ರಾಮದ ಬೋಳಿಯಾರ ಎಂಬಲ್ಲಿ ನಡೆದಿದೆ.ಬೆಳ್ತಂಗಡಿ ತಾಲೂಕಿನ ಕಳಂಜ ಗ್ರಾಮದ ನಿವಾಸಿ ಮಂಜುನಾಥ್ (38) ಗಾಯಗೊಂಡವರು.

ಅವರು ಮಾ.8ರಂದು ರಾತ್ರಿ ತಮ್ಮ KA 21 L 0135 ನಂಬರಿನ ಮೋಟಾರ್ ಸೈಕಲ್‌ನಲ್ಲಿ ಧರ್ಮಸ್ಥಳದಿಂದ ಕಳಂಜ ಕಡೆಗೆ ತೆರಳುತ್ತಿದ್ದ ವೇಳೆ, ಬೋಳಿಯಾರ ಬಳಿ ಎದುರಿನಿಂದ ಬಂದ KA 20 MB 4311 ನಂಬರಿನ ಕಾರನ್ನು ಅದರ ಚಾಲಕ ಸಚಿನ್ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಡಿಕ್ಕಿಯ ಪರಿಣಾಮ ಮಂಜುನಾಥ್ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಕಾರಿನ ಚಾಲಕ ಹಾಗೂ ಸ್ಥಳೀಯರು ಗಾಯಾಳುವನ್ನು ತಕ್ಷಣ ಉಪಚರಿಸಿ ಚಿಕಿತ್ಸೆಗಾಗಿ ಉಜಿರೆಯ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಕುರಿತು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 17/2026ರಂತೆ ಕಲಂ 281, 125(ಎ) BNS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!