Tuesday, July 21, 2026
spot_imgspot_img
spot_imgspot_img

ಬಾಲ ಗರ್ಭಿಣಿ ಪ್ರಕರಣಗಳ ವರದಿ ಕಡ್ಡಾಯ: ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ ಕರ್ನಾಟಕ ಸರಕಾರ

- Advertisement -
- Advertisement -

ಬೆಂಗಳೂರು :ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪೋಕ್ಸೋ ಕಾಯಿದೆಯಡಿ (Protection of Children from Sexual Offences Act, 2012) ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಾಲ ಗರ್ಭಿಣಿ ಪ್ರಕರಣಗಳ ಕುರಿತು ಕಡ್ಡಾಯ ವರದಿ ಮತ್ತು ಕ್ರಮಗಳ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ.

ಮಾರ್ಗಸೂಚಿಯ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರಲ್ಲಿ ಗರ್ಭಧಾರಣೆ ಪ್ರಕರಣ ಕಂಡುಬಂದಾಗ, ಚಿಕಿತ್ಸೆ ನೀಡುವ ವೈದ್ಯರು ತಕ್ಷಣವೇ Special Juvenile Police Unit (SJPU) ಅಥವಾ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವುದು ಕಡ್ಡಾಯ. ಇದರ ಜೊತೆಗೆ, ಚೈಲ್ಡ್ ಹೆಲ್ಸ್ಲೈನ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೂ ವರದಿ ಕಳುಹಿಸಬೇಕು. ವರದಿ ಮಾಡದ ಆಸ್ಪತ್ರೆಗಳು ಮತ್ತು ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಪೋಕ್ಸೋ ಕಾಯಿದೆಯ ಸೆಕ್ಷನ್ 19(1) ಪ್ರಕಾರ, ಯಾವುದೇ ವ್ಯಕ್ತಿ ಪ್ರಕರಣದ ಬಗ್ಗೆ ತಿಳಿದಿದ್ದರೂ ವರದಿ ಮಾಡದಿದ್ದರೆ ಅದು ಕಾನೂನು ಉಲ್ಲಂಘನೆ. ಸೆಕ್ಷನ್ 21(2) ಪ್ರಕಾರ, ವರದಿ ಮಾಡದ ಸಂಸ್ಥೆಯ ಮುಖ್ಯಸ್ಥರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ.

ಆದೇಶದಲ್ಲಿ ಆಸ್ಪತ್ರೆಗಳು ಮತ್ತು ವೈದ್ಯರು ರೋಗಿಯ ಗೌಪ್ಯತೆ ಕಾಪಾಡುವುದು, ತನಿಖಾ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡುವುದು, ಹಾಗೂ ಸಿಬ್ಬಂದಿಗೆ ಪೋಕ್ಸೋ ಕಾಯಿದೆಯ ಎಡ್ಯು-ಮಾಡ್ಯೂಲ್‌ಗಳ ತರಬೇತಿ ನೀಡುವುದು ಕಡ್ಡಾಯವೆಂದು ಸೂಚಿಸಲಾಗಿದೆ.

ಈ ಮಾರ್ಗಸೂಚಿ ತಕ್ಷಣದಿಂದ ಜಾರಿಯಾಗಿದ್ದು, ಬಾಲಕಿಯರ ಹಕ್ಕುಗಳ ರಕ್ಷಣೆ ಮತ್ತು ಅಪರಾಧಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಸರ್ಕಾರ ಗಂಭೀರ ನಿರ್ಧಾರ ಕೈಗೊಂಡಿದೆ. ಈ ಕ್ರಮದಿಂದ ಖಾಸಗಿ ಆಸ್ಪತ್ರೆಗಳು ಕಡ್ಡಾಯ ವರದಿ ವ್ಯವಸ್ಥೆ ಅನುಸರಿಸಬೇಕಾಗಿದ್ದು, ಮಕ್ಕಳ ಸುರಕ್ಷತೆ ಮತ್ತು ನ್ಯಾಯದಾನ ಖಚಿತಪಡಿಸಲು ಸರ್ಕಾರವು ಬಲವಾದ ಹೆಜ್ಜೆ ಇಟ್ಟಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!