Sunday, July 26, 2026
spot_imgspot_img
spot_imgspot_img

ಆಟವಾಡುತ್ತಿದ್ದ ವೇಳೆ ಪಾತ್ರೆಯೊಳಗೆ ಸಿಲುಕಿದ್ದ ಮಗುವನ್ನು ರಕ್ಷಿಸಿದ ಪೊಲೀಸರು!

- Advertisement -
- Advertisement -

ತಿರುವನಂತಪುರಂ: ಆಟವಾಡುತ್ತಿದ್ದಾಗ ಪಾತ್ರೆಯೊಳಗೆ ಸಿಲುಕಿದ 2 ವರ್ಷದ ಮಗುವನ್ನು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಅತ್ಯಂತ ನಾಜೂಕಾಗಿ ರಕ್ಷಿಸಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

ಮನೆಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಅಡುಗೆ ಮನೆಯಲ್ಲಿದ್ದ ದೊಡ್ಡದಾದ ಅಲ್ಯೂಮಿನಿಯಂ ಪಾತ್ರೆಯೊಳಗೆ ಇಳಿದು, ಹೊರಬರಲು ಪ್ರಯತ್ನಿಸಿದಾಗ ಮಗುವಿನ ಸೊಂಟದ ಭಾಗ ಪಾತ್ರೆಯಲ್ಲಿ ಸಿಲುಕಿಕೊಂಡಿತ್ತು. ಮಗುವಿನ ಅಳು ಕೇಳಿ ಓಡಿ ಬಂದ ಪೋಷಕರು ಎಷ್ಟೇ ಪ್ರಯತ್ನಿಸಿದರೂ ಮಗುವನ್ನು ಹೊರತೆಗೆಯಲು ಸಾಧ್ಯವಾಗದೇ ಪೊಲೀಸರಿಗೆ ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಸಿಬ್ಬಂದಿಗಳು ಮಗುವಿಗೆ ನೋವಾಗದಂತೆ ಅತ್ಯಂತ ಎಚ್ಚರಿಕೆ ವಹಿಸಿ, ಹೈಡ್ರಾಲಿಕ್ ಕಟ್ಟರ್‌ಗಳನ್ನು ಬಳಸಿ ಅಲ್ಯೂಮಿನಿಯಂ ಪಾತ್ರೆಯನ್ನು ನಿಧಾನವಾಗಿ ಕತ್ತರಿಸುವ ಮೂಲಕ ಮಗುವನ್ನು ಸುರಕ್ಷಿತವಾಗಿ ಕಾಪಾಡಿದ್ದು, ಮಗು ಯಾವುದೇ ಗಾಯಗಳಿಲ್ಲದೆ ಪಾರಾಗಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!