- Advertisement -
- Advertisement -






ಪುತ್ತೂರು: ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲಾ 317-D ವ್ಯಾಪ್ತಿಯ ಲಯನ್ಸ್ ಕ್ಲಬ್ ಪುತ್ತೂರು, ರೀಜನ್ VII, ಝೋನ್-II ವತಿಯಿಂದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂನ್ 23ರಂದು ಸಂಜೆ 7 ಗಂಟೆಗೆ ಪುತ್ತೂರಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.
ನೂತನ ಅಧ್ಯಕ್ಷರಾಗಿ ಲಯನ್ ವೈ.ಕೆ. ಮಂಜುನಾಥ ಗೌಡ, ಕಾರ್ಯದರ್ಶಿಯಾಗಿ ಲಯನ್ ಎ. ಆನಂದ ಆಚಾರ್ಯ ಹಾಗೂ ಕೋಶಾಧಿಕಾರಿಯಾಗಿ ಲಯನ್ ಹೆಚ್. ಸುಂದರ ಗೌಡ ಆಯ್ಕೆಯಾಗಿದ್ದು, ಪದಾಧಿಕಾರಿಗಳ ಪದಗ್ರಹಣವನ್ನು ಲಯನ್ಸ್ ಕ್ಲಬ್ ಮಂಗಳೂರು 2025-26ರ ಅಧ್ಯಕ್ಷರಾದ ಲಯನ್ ರಾಜೇಶ್ ಎಂ. ಕಾಮತ್ ಅವರು ನೆರವೇರಿಸಲಿದ್ದಾರೆ.
- Advertisement -








