- Advertisement -
- Advertisement -






ಬೆಂಗಳೂರು: ಕಾಯಿಲೆ ವಿಚಾರಕ್ಕೆ ಗಲಾಟೆಯಾಗಿ ಪತ್ನಿಯ ಹತ್ಯೆಗೈದು ವೃದ್ಧ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪತ್ನಿ ಸುಮಿತ್ರಾ ಪ್ರಸಾದ್ (77) ಅನ್ನು ಕೊಲೆ ಮಾಡಿ ಪತಿ ಶಿವಾನಂದಂ ಪ್ರಸಾದ್ (83) ಆತ್ಮಹತ್ಯೆ ಶರಣಾಗಿದ್ದಾರೆ. ಬಿಹಾರ ಮೂಲದ ದಂಪತಿ ಮಗನ ಮನೆಗೆಂದು ಬೆಂಗಳೂರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.
ಪತ್ನಿಗೆ ಕಣ್ಣಿನ ಸಮಸ್ಯೆ, ಹೃದಯ ಸಂಬಂಧಿ ಖಾಯಿಲೆ ಇತ್ತು. ಇಬ್ಬರ ನಡುವೆ ವಯೋಸಹಜ ಕಾಯಿಲೆ ವಿಚಾರಕ್ಕೆ ಜಗಳವಾಗುತ್ತಿತ್ತು. ನಿನ್ನೆ ರಾತ್ರಿ ಊಟ ಮಾಡಿ, ರೂಂಗೆ ಹೋಗಿ ಬಂದು ಮಲಗಿದ್ದರು. ಈ ವೇಳೆ ಇಬ್ಬರ ಮಧ್ಯೆ ಜಗಳ ಆಗಿದೆ. ರೊಚ್ಚಿಗೆದ್ದ ವೃದ್ಧ ಪತಿ ಉಸಿರುಗಟ್ಟಿಸಿ ಪತ್ನಿಯನ್ನ ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಘಟನೆ ಸ್ಥಳಕ್ಕೆ ಸಂಪಿಗೇಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
- Advertisement -








