ಮುರಳಿ ವಿಟ್ಲ ಹಾಗೂ ಇಬ್ಬರು ಮಕ್ಕಳನ್ನು ರಕ್ಷಿಸಿದ ಮಹೇಶ ಗೌಡ ಬನ ಇವರಿಗೆ ಸನ್ಮಾನ



ವಿಟ್ಲ ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇವರಿಂದ ಆಟಿಡೊಂಜಿ ಕೂಟ ಕಾರ್ಯಕ್ರಮ ವಿಟ್ಲ ದ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ವಿಟ್ಲದ ಆಪದ್ಭಾಂಧವ ಅರ್ಪಿತ್ ಚಿಕನ್ ಸೆಂಟರಿನ ಮಾಲಕ ಮುರಳಿ ವಿಟ್ಲ ಹಾಗೂ ಇತ್ತೀಚಿಗೆ ವಿಟ್ಲದ ಕೋಟಿಕೆರೆಯಲ್ಲಿ ಈಜು ಬಾರದೆ ಮುಳುಗುತ್ತಿದ್ದ ಕೆಲಿಂಜದ ಒಬ್ಬ ಮತ್ತು ಬೈರಿಕಟ್ಟೆಯ ಇಬ್ಬರು ಮಕ್ಕಳನ್ನು ರಕ್ಷಿಸಿದ ಮಹೇಶ ಗೌಡ ಬನ ಇವರನ್ನು ಸನ್ಮಾನಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ವಿಜಯ ಸಾಮ್ರಾಟ್ ಇದರ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ಮೈತ್ರೇಯಿ ಗುರುಕುಲದ ಜಗನ್ನಾಥ ಕಾಸರಗೋಡು, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು, ಮಾಜಿ ಅಧ್ಯಕ್ಷ ಅರುಣ್ ವಿಟ್ಲ, ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷ ರವಿಪ್ರಕಾಶ್, ಸ್ವಸ್ತಿಕ್ ಫ್ರೆಂಡ್ಸ್ ಅಧ್ಯಕ್ಷ ತಾರಾನಾಥ, ಕಾರ್ಯದರ್ಶಿ ಆಕಾಶ್ ವಿಟ್ಲ, ಕೋಶಾಧಿಕಾರಿ ಚಂದ್ರಶೇಖರ್ ವಿಟ್ಲ, ಸದಸ್ಯರುಗಳಾದ, ನಾಗೇಶ್ ಬಸವನಗುಡಿ, ಸುದರ್ಶನ್ ವಿಟ್ಲ, ರಿತೇಶ್, ಜೀವನ್, ರಂಜಿತ್, ರಾಹುಲ್ ಶೆಣೈ, ವಿಘ್ನೇಶ್, ಉತ್ತೇಜ್, ಆದರ್ಶ್, ದಯಾನಂದ, ವಿಶ್ವನಾಥ ಅಳಿಕೆ, ಶರತ್, ಮನೋಜ್, ಶ್ರೀನಿವಾಸ್ ಗೌಡ, ಮೋನಪ್ಪ ಗೌಡ, ಜತ್ತಪ್ಪ ಗೌಡ, ಹೃತಿಕ್, ಸುಬ್ರಹ್ಮಣ್ಯ, ನಿತೀಶ್, ಪ್ರೀತೇಶ್, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು .
ರಿತೇಶ್ ಸ್ವಾಗತಿಸಿದರು. ಹರೀಶ್ ವಿಟ್ಲ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.








