Friday, August 7, 2026
spot_imgspot_img
spot_imgspot_img

ಕ್ಯಾಲಿಫೋರ್ನಿಯಾ- ಏಕಾಂಗಿ ಪಾದಯಾತ್ರೆ ಹೋಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಶವವಾಗಿ ಪತ್ತೆ!

- Advertisement -
- Advertisement -

ವಾಷಿಂಗ್ಟನ್‌: ಕ್ಯಾಲಿಫೋರ್ನಿಯಾದ ಬಿಗ್ ಪೈನ್ ಲೇಕ್ಸ್ ಪ್ರದೇಶದಲ್ಲಿ ವಾರಾಂತ್ಯದಲ್ಲಿ ಏಕಾಂಗಿ ಪಾದಯಾತ್ರೆ ವೇಳೆ ಕಾಣೆಯಾಗಿದ್ದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಾಂತಾ ಬಾರ್ಬರಾ ಭಾರತೀಯ ಮೂಲದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ.

ಕ್ರಮ್‌ ಮುಬಾಯಿ ಮೃತ ದುರ್ದೈವಿ. ಈತ UCSB ಯ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ. ಆತನ ಮೃತದೇಹವನ್ನು ಇನ್ಯೊ ರಾಷ್ಟ್ರೀಯ ಅರಣ್ಯದಿಂದ ವಶಪಡಿಸಿಕೊಂಡಿದೆ.

ಡಾಕ್ಟರೇಟ್ ವಿದ್ಯಾರ್ಥಿ ಕೊನೆಯ ಬಾರಿಗೆ ಆಗಸ್ಟ್ 1 ರಂದು ರಾತ್ರಿ 8:30 ರ ಸುಮಾರಿಗೆ ತನ್ನ ಕುಟುಂಬವನ್ನು ಸಂಪರ್ಕಿಸಿದ್ದ. ನಿಗದಿತ ಸಮಯಕ್ಕೆ ತನ್ನ ಮನೆಗೆ ಹಿಂತಿರುಗದ ಕಾರಣ ಕುಟುಂಬದ ಸಂಪರ್ಕಕ್ಕೆ ಸಿಗಲಿಲ್ಲ. ವಿಕ್ರಮ್‌ ಕಾಣೆಯಾಗಿದ್ದಾರೆ ಎಂದು ದೂರು ನೀಡಲಾಯಿತು. ಕ್ಯಾಲಿಫೋರ್ನಿಯಾ ಹೆದ್ದಾರಿ ಪೆಟ್ರೋಲ್‌ನಿಂದ ಶೋಧ ಕಾರ್ಯಾಚರಣೆ ನಡೆಸಲಾಯಿತು. ಆಗಸ್ಟ್ 3 ರ ಸಂಜೆ ಮೃತದೇಹ ಪತ್ತೆಯಾಗಿದೆ.

ವಿಕ್ರಮ್ ಹೇಗೆ ಮೃತಪಟ್ಟ ಎಂಬುದರ ಕುರಿತು ತನಿಖಾಧಿಕಾರಿಗಳು ವಿವರಗಳನ್ನು ಬಿಡುಗಡೆ ಮಾಡಿಲ್ಲ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!