

ಹೊಸದಿಲ್ಲಿ: ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆಯುತ್ತಿರುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ ಇತರೆಡೆಗಳಲ್ಲಿ ಫಾರ್ಮ್ 6ರ ಮೂಲಕ ಹೊಸ ಮತದಾರರ ನೋಂದಣಿಗೆ ಅರ್ಜಿ ಸಲ್ಲಿಸುವವರು ಹಿಂದಿನ ಎಸ್ಐಆರ್ನ ಮತದಾರರ ಪಟ್ಟಿಯೊಂದಿಗೆ ತಮ್ಮ ಅಥವಾ ತಮ್ಮ ಸಂಬಂಧಿಕರ ಹೆಸರನ್ನು ಜೋಡಿಸುವ (ಮ್ಯಾಪಿಂಗ್) ಘೋಷಣೆಯನ್ನು ಲಗತ್ತಿಸಬೇಕಾಗಿಲ್ಲ.

ಎಸ್ಐಆರ್ ನಡೆಯುತ್ತಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಫಾರ್ಮ್ 6 ರೊಂದಿಗೆ ಅರ್ಜಿದಾರರು ತಮ್ಮ ಅಥವಾ ತಮ್ಮ ಸಂಬಂಧಿಕರ ಹಿಂದಿನ ಎಸ್ಐಆರ್ನ ಮತದಾರರ ಪಟ್ಟಿ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸುವುದು ಮುಂದುವರಿಯಲಿದೆ. ಇದರೊಂದಿಗೆ ತಂದೆ, ತಾಯಿ ಹಾಗೂ ಸಂಗಾತಿಯ ಹೆಸರುಗಳು ಮತ್ತು ಅವರ ಎಪಿಕ್ ಸಂಖ್ಯೆಗಳು ಲಭ್ಯವಿದ್ದರೆ ಅವುಗಳನ್ನು ನೀಡಬೇಕಾಗುತ್ತದೆ.ಶನಿವಾರ ಚುನಾವಣಾ ಆಯೋಗವು ಹೇಳಿಕೆಯೊಂದರಲ್ಲಿ ಎಸ್ಐಆರ್ನ ಭಾಗವಾಗಿ ಹೊಸ ಮತದಾರರು ಫಾರ್ಮ್ 6 ರೊಂದಿಗೆ ಘೋಷಣೆಯನ್ನು ಸಲ್ಲಿಸುವುದನ್ನು ಮುಂದುವರಿಸುವ ಅಗತ್ಯವನ್ನು ಸಮರ್ಥಿಸಿಕೊಂಡಿದೆ. ಎಸ್ಐಆರ್ಗಾಗಿ ಫಾರ್ಮ್ 6ಕ್ಕೆ ಲಗತ್ತಿಸಲಾದ ಈ ಘೋಷಣೆಯನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ ಎಂದು ಅದು ತಿಳಿಸಿದೆ.ಎಸ್ಐಆರ್ ಅಲ್ಲದ ಅವಧಿಯಲ್ಲಿ 1960ರಮತದಾರರ ನೋಂದಣಿ ನಿಯಮಗಳ ಪ್ರಕಾರಅನ್ವಯವಾಗುವ ನಮೂನೆಗಳನ್ನು ಬಳಸಲಾಗುವುದು ಎಂದು ಆಯೋಗವು ತಿಳಿಸಿದೆ.

ಈ ಘೋಷಣೆಯನ್ನು ಮೊದಲ ಬಾರಿಗೆ 2025ರ ಜೂನ್ 24ರಂದು ಬಿಹಾರಕ್ಕಾಗಿ ಹೊರಡಿಸಲಾದ ಎಸ್ಐಆರ್ ಆದೇಶದಲ್ಲಿ ಫಾರ್ಮ್ 6 ಕ್ಕೆ ಸೇರಿಸಲಾಗಿತ್ತು.ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳು ಸೇರಿದಂತೆ ಎಸ್ಐಆರ್ಯೇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಕ್ಷಣದಿಂದಲೇ ಪೂರ್ವ-ಎಸ್ಐಆರ್ ಫಾರ್ಮ್ 6 ವ್ಯವಸ್ಥೆಗೆ ಮರಳಲಿವೆ ಎಂದು ಮೂಲಗಳು ತಿಳಿಸಿವೆ.
ಬಿಹಾರದ ಎಸ್ಐಆರ್ ಆದೇಶದಲ್ಲಿ ಪರಿಚಯಿಸಿದಾಗಿನಿಂದ ಫಾರ್ಮ್ 6ಕ್ಕೆ ಲಗತ್ತಿಸಬೇಕಾದ ಘೋಷಣೆಯಲ್ಲಿ ಬದಲಾವಣೆಗಳಾಗಿವೆ. ಬಿಹಾರದ ಘೋಷಣೆಯು ಹೊಸ ನೋಂದಣಿ ಬಯಸುವವರು ತಮ್ಮ ಅಥವಾ ತಮ್ಮ ಪೋಷಕರ ಹುಟ್ಟಿದ ದಿನಾಂಕ ಎಸ್ ಐ ಆರ್ ನೊಂದಿಗೆ ಮ್ಯಾಪಿಂಗ್ ಮಾಡುವುದನ್ನು ಪರಿಚಯಿಸಲಾಯಿತು.








