- Advertisement -
- Advertisement -



ನವೆಂಬರ್ 29ರಂದು ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ವೈಭವಯುತವಾಗಿ ನಡೆಯಲಿರುವ ಕಲಾತಪಸ್ವಿ ಸಾಂಸ್ಕೃತಿಕ ತಂಡ ಪ್ರಸ್ತುತ ಪಡಿಸುವ “ಗೆಜ್ಜೆನಾದ -ಸೀಸನ್ 3 “ಏಕವ್ಯಕ್ತಿ ನೃತ್ಯ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆಯು ಶ್ರೀ ಜಯದುರ್ಗಾಪರಮೇಶ್ವರೀ ದೇವಸ್ಥಾನ ಧರ್ಮನಗರದಲ್ಲಿ ಕ್ಷೇತ್ರದ ಅರ್ಚಕರಾದ ಶ್ರೀ ಕಾಮಚಂದ್ರ ಚಕ್ರ ಪಾಲೇತ್ತಾಯರವರ ದಿವ್ಯ ಹಸ್ತದಲ್ಲಿ ನಡೆಯಿತು.
ಈ ಶುಭಸಂಧರ್ಭದಲ್ಲಿ ಸಿದ್ದಿವಿನಾಯಕ ಯುವಕ ಮಂಡಲದ ಅಧ್ಯಕ್ಷರಾದ ಜನಾರ್ಧನ ಕಾರ್ಯಡಿ, ಕಾರ್ಯದರ್ಶಿ ಶೈಲೇಶ್ ಶೆಟ್ಟಿ ಮೂಡೈಮಾರು, ಇಡ್ಕಿದು ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಉಮೇಶ ಒಡ್ಯರ್ಪೆ, ರಾಜೇಶ್ ಕಾರ್ಯಡಿ, ಹರೀಶ ಉರಿಮಜಲು, ಸುಂದರ ನೂಜಿ, ಗಣೇಶ್ ಅರ್ಕೆಚ್ಚಾರು ಗೆಜ್ಜೆನಾದ ಸ್ಪರ್ಧೆಯ ಸಂಚಾಲಕರಾದ ಜೈದೀಪ್ ಅಮೈ, ಕಾರ್ಯದರ್ಶಿ ಶ್ರೀಮತಿ ಸುಶ್ಮಿತಾ ಧನಂಜಯ ಕಾರ್ಯಡಿ, ಸದಸ್ಯರಾದ ಚೈತ್ರೇಶ್ ದೇವಸ್ಯ,ಚರಣ್ ಅಮೈ, ಕಿರಣ್ ಅಮೈ ಮತ್ತಿತರರು ಉಪಸ್ಥಿತರಿದ್ದರು.

- Advertisement -








