Sunday, November 1, 2026
spot_imgspot_img
spot_imgspot_img

ರಾಜ್ಯೋತ್ಸವ ಪ್ರಶಸ್ತಿಯ ಘನತೆ ಎತ್ತ ಸಾಗುತ್ತಿದೆ? ಸಾಧಕರಿಗೆ ಗೌರವವೋ ಅಥವಾ ಪ್ರಶಸ್ತಿ ವ್ಯವಸ್ಥೆಯ ಅಪಹಾಸ್ಯವೋ?

- Advertisement -
- Advertisement -

2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಕ್ರೀಡಾ ಕ್ಷೇತ್ರದ ಹೆಸರಿನಲ್ಲಿ ರಾಕೇಶ್ ಮಲ್ಲಿ (ಕ್ರಮ ಸಂಖ್ಯೆ 92) ಅವರನ್ನು ಆಯ್ಕೆ ಮಾಡಿರುವುದು ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ವಿಶ್ವಾಸಾರ್ಹತೆ ಹಾಗೂ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಭೂಗತ ಲೋಕದ ನಂಟು ಹಾಗೂ ಅಪರಾಧ ಪ್ರಕರಣಗಳ ಹಿನ್ನೆಲೆಯಿಂದ ಮಾಧ್ಯಮಗಳಲ್ಲಿ ಸುದ್ದಿಯಾಗಿರುವ, ತಾನೇ ಮಾಜಿ ಭೂಗತ ಲೋಕದ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗುವ ರಾಕೇಶ್ ಮಲ್ಲಿ ಅವರಿಗೆ ಇಂತಹ ಪ್ರತಿಷ್ಠಿತ ಗೌರವ ನೀಡಲು ಮುಂದಾಗಿರುವುದು ಎಷ್ಟು ಸಮಂಜಸ?

ಜಿಲ್ಲಾಡಳಿತಕ್ಕೆ ಕೆಲವು ನೇರ ಪ್ರಶ್ನೆಗಳು:

1. ರಾಕೇಶ್ ಮಲ್ಲಿ ಅವರು ಪ್ರಸ್ತುತ ರೌಡಿಶೀಟರ್ ಅಥವಾ ಹಿಸ್ಟರಿ ಶೀಟರ್ ಪಟ್ಟಿಯಲ್ಲಿದ್ದಾರೆಯೇ? ಪ್ರಶಸ್ತಿಗೆ ಆಯ್ಕೆ ಮಾಡುವ ಮುನ್ನ ಪೊಲೀಸ್ ಇಲಾಖೆಯಿಂದ ಸೂಕ್ತ ಹಿನ್ನೆಲೆ ಪರಿಶೀಲನೆ ನಡೆಸಲಾಗಿದೆಯೇ?

2. ಕ್ರೀಡಾ ಕ್ಷೇತ್ರದಲ್ಲಿ ಅವರ ಸಾಧನೆಗಳೇನು? ಯಾವ ಕ್ರೀಡೆಯಲ್ಲಿ, ಯಾವ ಮಟ್ಟದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ?

3. ಕ್ರೀಡಾ ಕ್ಷೇತ್ರವನ್ನು ಗುರಾಣಿಯನ್ನಾಗಿ ಬಳಸಿಕೊಂಡು, ವಿವಾದಾತ್ಮಕ ಹಿನ್ನೆಲೆಯನ್ನು ಮರೆಮಾಚಿ, ಸೂಕ್ತ ಪರಿಶೀಲನೆಯಿಲ್ಲದೆ ಸರ್ಕಾರಿ ಗೌರವ ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆಯೇ?

4. ಅವರ ಹೆಸರನ್ನು ಶಿಫಾರಸು ಮಾಡಿದವರು ಯಾರು? ಆಯ್ಕೆ ಮಾಡಿದವರು ಯಾರು? ಆಯ್ಕೆಗೆ ಅನುಸರಿಸಿದ ಮಾನದಂಡಗಳೇನು?ರಾಜ್ಯೋತ್ಸವ ಪ್ರಶಸ್ತಿಗಳು ಯಾರದ್ದೋ ಪ್ರಭಾವ ಅಥವಾ ಶಿಫಾರಸಿನ ಆಧಾರದಲ್ಲಿ ನೀಡುವ ಗೌರವಗಳಲ್ಲ. ನಾಡು, ನುಡಿ, ಕಲೆ, ಸಂಸ್ಕೃತಿ, ಕ್ರೀಡೆ ಹಾಗೂ ಸಮಾಜಕ್ಕಾಗಿ ನಿಸ್ವಾರ್ಥವಾಗಿ ದುಡಿದ ನಿಜವಾದ ಸಾಧಕರಿಗೆ ಸಲ್ಲಬೇಕಾದ ಪ್ರತಿಷ್ಠಿತ ಸನ್ಮಾನ.

ಇಂತಹ ವಿವಾದಾತ್ಮಕ ಆಯ್ಕೆಗಳು ರಾಜ್ಯೋತ್ಸವ ಪ್ರಶಸ್ತಿಯ ಘನತೆಗೆ ಮಾತ್ರವಲ್ಲ, ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲೂ ಗೌರವಿಸಲ್ಪಡುವ ಸಾವಿರಾರು ನೈಜ ಸಾಧಕರ ಗೌರವಕ್ಕೂ ಧಕ್ಕೆ ತರುವ ಆತಂಕವಿದೆ.ಜಿಲ್ಲಾಡಳಿತ ಕೂಡಲೇ ಸಂಬಂಧಪಟ್ಟ ಪೊಲೀಸ್ ದಾಖಲೆಗಳು ಹಾಗೂ ಕ್ರೀಡಾ ಸಾಧನೆಗಳನ್ನು ಪರಿಶೀಲಿಸಿ, ಆಯ್ಕೆಯ ಮಾನದಂಡಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು.

ಆಯ್ಕೆ ಪ್ರಕ್ರಿಯೆಯಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಪ್ರಶಸ್ತಿ ಆಯ್ಕೆಯನ್ನು ಮರುಪರಿಶೀಲಿಸಬೇಕು.ಕರಾವಳಿಯ ಮಣ್ಣಿನಲ್ಲಿ ನಿಜವಾದ ಸಾಧಕರಿಗೆ ಬರವಿಲ್ಲ. ಹಾಗಿರುವಾಗ ಇಂತಹ ವಿವಾದಗಳಿಗೆ ಅವಕಾಶ ಮಾಡಿಕೊಟ್ಟು ರಾಜ್ಯೋತ್ಸವ ಪ್ರಶಸ್ತಿಯ ಘನತೆಗೆ ಧಕ್ಕೆ ತರುವುದು ಯಾಕೆ?ಇದು ಕೇವಲ ಒಬ್ಬ ವ್ಯಕ್ತಿಯ ಆಯ್ಕೆಯ ಪ್ರಶ್ನೆಯಲ್ಲ — ಇಡೀ ಪ್ರಶಸ್ತಿ ಆಯ್ಕೆ ವ್ಯವಸ್ಥೆಯ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಘನತೆಯ ಪ್ರಶ್ನೆ!

- Advertisement -

Related news

error: Content is protected !!