Friday, November 27, 2026
spot_imgspot_img
spot_imgspot_img

ಸಿಎಂ ಡಿಕೆಶಿ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ: ಆಟೋ ಚಾಲಕನ ಮೂಲಕ ಪೊಲೀಸರಿಗೆ ಅಪರಿಚಿತ ಕಾಲ್‌

- Advertisement -
- Advertisement -

ಬೆಂಗಳೂರು: ಸಿಎಂ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿರುವ ಘಟನೆ ತಡವಾಗಿ ತಿಳಿದುಬಂದಿದ್ದು, ಆಟೋ ಚಾಲಕನ ಮೂಲಕ ಪೊಲೀಸರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಬಾಂಬ್ ಬೆದರಿಕೆ ಹಾಕಿದ್ದಾನೆ.

ನವೆಂಬರ್‌ 7ನೇ ತಾರೀಖಿನಂದು ಈ ಘಟನೆ ನಡೆದಿದ್ದು, ಭಗವಂತರಾಯನ್ ಎಂಬವರು ನಮ್ಮ ಯಾತ್ರಿ ಆ್ಯಪ್ ಮೂಲಕ ಆಟೋ ಚಾಲನೆ ಮಾಡುತ್ತಿದ್ದರು. ಅಂದು ಕಾರ್ತಿಕ್ ಎಂಬಾತ ಸದಾಶಿವನಗರದಿಂದ ಆರ್.ಆರ್ ನಗರಕ್ಕೆ ತೆರಳಲು ಆಟೋ ಬುಕ್ ಮಾಡಿದ್ದ.

ಆಟೋ ಬುಕ್ ಮಾಡಿದ ಕಾರ್ತಿಕ್ ಪಿಕ್ ಅಪ್ ಲೊಕೇಶನ್ ಕಳುಹಿಸಿದ್ದು, ಅದು ಸಿಎಂ ಡಿ.ಕೆ ಶಿವಕುಮಾರ್ ಅವರ ನಿವಾಸದ ಸಮೀಪ ತೋರಿಸಿತ್ತು. ಹೀಗಾಗಿ ಲೊಕೇಶನ್‌ಗೆ ತೆರಳಿದ ಆಟೋ ಚಾಲಕ, ಬುಕ್ಕಿಂಗ್ ಮಾಡಿದ್ದ ವ್ಯಕ್ತಿಗೆ ಕರೆ ಮಾಡಿದ್ದಾನೆ.

ಈ ವೇಳೆ ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, ನಾನು ಸಿಎಂ ಮನೆಯಲ್ಲಿ ಇದ್ದೇನೆ. ಇಲ್ಲಿ ಬ್ಯಾರಿಕೇಡ್ ಬಳಿ ಪೊಲೀಸರು ಇದ್ದಾರೆ. ಅವರಿಗೆ ಫೋನ್ ಕೊಡು ಅಂತಾ ಹೇಳಿದ್ದಾನೆ. ಅದರಂತೆ ಆಟೋ ಚಾಲಕ ಅಲ್ಲಿದ್ದ ಪೊಲೀಸರಿಗೆ ಮೊಬೈಲ್ ನೀಡಿದ್ದಾನೆ. ಪೊಲೀಸರು ಫೋನ್ ಸ್ವೀಕರಿಸುತ್ತಿದ್ದಂತೆ ಮಾತನಾಡಿದ ಅಪರಿಚಿತ ವ್ಯಕ್ತಿ, ಸಿಎಂ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿ ಕಾಲ್‌ ಕಟ್‌ ಮಾಡಿದ್ದಾನೆ. ಇದರಿಂದ ಆತಂಕಗೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!