Tuesday, June 23, 2026
spot_imgspot_img
spot_imgspot_img

ಪೋಷಕರು ಬೈದಿದ್ದಕ್ಕೆ ವಿಷ ಸೇವಿಸಿ ವಿದ್ಯಾರ್ಥಿ ಸಾವು

- Advertisement -
- Advertisement -

ರಾಯಚೂರು: ಕಾಲೇಜಿಗೆ ಹೋಗುವಂತೆ ಪೋಷಕರು ಬೈದಿದ್ದಕ್ಕೆ ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಲಿಂಗಸುಗೂರಿನಲ್ಲಿ ನಡೆದಿದೆ.ಲಿಂಗಸುಗೂರು ತಾಲೂಕಿನ ಗುಂತಗೋಳ ಗ್ರಾಮದ ಮೊದಲ ವರ್ಷ ಬಿಎ ವಿದ್ಯಾರ್ಥಿ ಮಂಜುನಾಥ್ (19) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಷಸೇವನೆ ಮಾಡಿ ಗ್ರಾಮದಿಂದ ತನ್ನ ವಸತಿ ನಿಲಯಕ್ಕೆ ಬಂದಿದ್ದ ವಿದ್ಯಾರ್ಥಿ ಮನೆಯಲ್ಲಿ ಜಗಳವಾಗಿದ್ದಕ್ಕೆ ವಿಷ ಸೇವಿಸಿರುವುದಾಗಿ ಸ್ನೇಹಿತರಿಗೆ ಹೇಳಿಕೊಂಡಿದ್ದಾನೆ. ಅಸ್ವಸ್ಥಗೊಂಡ ವಿದ್ಯಾರ್ಥಿಯನ್ನು ಸ್ನೇಹಿತರು ಕೂಡಲೇ ಲಿಂಗಸುಗೂರು ತಾಲೂಕಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ವಿದ್ಯಾರ್ಥಿಯನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಆಸ್ಪತ್ರೆ ಮಾರ್ಗ ಮಧ್ಯದಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

ಲಿಂಗಸುಗೂರು ಪರಿಶಿಷ್ಟ ವರ್ಗಗಳ ವಸತಿನಿಲಯದಲ್ಲಿದ್ದ ವಿದ್ಯಾರ್ಥಿ, ಎಂಟು-ಹತ್ತು ದಿನಗಳಿಂದ ತನ್ನ ಗ್ರಾಮದಲ್ಲೇ ಉಳಿದಿದ್ದ. ಕಾಲೇಜಿಗೆ ಹೋಗುವಂತೆ ಪೋಷಕರು ಬುದ್ಧಿ ಮಾತು ಹೇಳಿದ್ದಕ್ಕೆ ಜಗಳವಾಡಿ ಬಂದಿದ್ದ ಎಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ. ಘಟನೆ ಹಿನ್ನೆಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!