
ಕಾವೂರು: ಬಿಜೆಪಿ ಯುವಮೋರ್ಚಾ ಉತ್ತರ ಮಂಡಲ ಇದರ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ, ಹುತಾತ್ಮ ಯೋಧರಿಗೆ ನುಡಿನಮನ, ನಿವೃತ್ತ ಯೋಧರಿಗೆ ಸಮ್ಮಾನ ಕಾರ್ಯಕ್ರಮ ಕಾವೂರಿನ ಬಿಜೆಪಿ ಕಚೇರಿಯಲ್ಲಿ ಜರಗಿತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಕಾರ್ಗಿಲ್ ಯುದ್ದದಲ್ಲಿ ಮಡಿದ ವೀರ ಸೈನಿಕರನ್ನು ಸ್ಮರಿಸಿಕೊಂಡರು. ಕಾರ್ಗಿಲ್ ಯುದ್ದದಿಂದ ಭಾರತ ಪಾಠ ಕಲಿತು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಕಲ್ಪ ತೊಟ್ಟರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ವೀರಯೋಧರಿಗೆ ಬೇಕಾದ ಮೂಲಸೌಕರ್ಯ ಒದಗಿಸಲು ಗರಿಷ್ಠ ಆದ್ಯತೆ ನೀಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಸಮ್ಮಾನಿಸಲಾಯಿತು.


ನಿವೃತ್ತ ಯೋಧ ಭಾಸ್ಕರ ರೈ, ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಭರತ್‌ರಾಜ್ ಕೃಷ್ಣಾಪುರ, ಉಪಮೇಯರ್ ಸುಮಂಗಳ ರಾವ್, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಶ್ವೇತ ಎ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪೂಜಾ ಪೈ, ರಾಜೇಶ್ ಕೊಟ್ಟಾರಿ, ಯುವ ಮೋರ್ಚಾ ಪದಾಧಿಕಾರಿಗಳಾದ ವಿನ್ಯಾಸ್ ಶೆಟ್ಟಿ, ರಕ್ಷಿತ್ ಪೂಜಾರಿ, ಗೌತಮ್ ಕೋಡಿಕಲ್, ಹರೀಶ್, ಅನುರಾಘ್, ಪಾಲಿಕೆ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು. ಸಂಜಿತ್ ಶೆಟ್ಟಿ ಸ್ವಾಗತಿಸಿದರು, ವರುಣ್ ಶೇಣವ ಧನ್ಯವಾದ ಅರ್ಪಿಸಿದರು. ಮಹೇಶ್ ಮೂರ್ತಿ ಸುರತ್ಕಲ್ ನಿರೂಪಿಸಿದರು.











