Tuesday, June 30, 2026
spot_imgspot_img
spot_imgspot_img

ದಂಪತಿಗಳ ಸಾವಿಗೆ ಕಾರಣವಾಯ್ತಾ? ಮೊಬೈಲ್ ಬಂದ ಮೆಸೇಜ್!

- Advertisement -
- Advertisement -

ಚಿತ್ರದುರ್ಗ: ಮೊಬೈಲ್ ಗೆ ಬಂದ ಒಂದು ಮೆಸೇಜ್ ದಂಪತಿಗಳ ಸಾವಿಗೆ ಕಾರಣವಾದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಯಾದಲಗಟ್ಟಿ ಗ್ರಾಮದಲ್ಲಿ ಈ ದುರಂತ ಘಟನೆ ನಡೆದಿದೆ. ಮೃತ ದಂಪತಿ ಮಹಾಂತೇಶ ಹಾಗೂ ಆತನ ಪತ್ನಿ ಶೈಲಾ ಎನ್ನಲಾಗಿದೆ. ಇದರಿಂದಾಗಿ ಇವರ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

9 ವರ್ಷದ ಹಿಂದೆ ವಿವಾಹವಾಗಿದ್ದ ಈ ದಂಪತಿಯ ನದುವೆ ಕಳೆದೆರಡು ವರ್ಷಗಳಿಂದ ಪದೇ ಪದೇ ಕಲಹ ನಡೆಯುತ್ತಿತ್ತೆಂದು ಹೇಳಲಾಗಿದೆ. ಪತ್ನಿ ಶೈಲಾ ಸದಾಕಾಲ ಮೊಬೈಲ್ನಲ್ಲೇ ಮುಳುಗುತ್ತಿದ್ದರಿಂದ ಮಹಾಂತೇಶ್ ಆಕ್ಷೇಪ ವ್ಯಕ್ತಪಡಿಸಿದ್ದ ಎನ್ನಲಾಗಿದೆ.

ಶನಿವಾರ ಆಕೆಯ ಮೊಬೈಲ್ ಗೆ ಬಂದ ಮೆಸೇಜ್ ಕಂಡ ಮಹಾಂತೇಶ್ ಜಗಳ ಆರಂಭಿಸಿದ್ದು, ಇದರಿಂದ ಮನನೊಂದ ಶೈಲಾ ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ಸಾವಿನಿಂದ ಭಯಗೊಂಡ ಮಹಾಂತೇಶ್ ಸೋಮವಾರ ಬೆಳಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!