Wednesday, June 24, 2026
spot_imgspot_img
spot_imgspot_img

ಆಟೋ ರಿಕ್ಷಾದಲ್ಲಿ ಅಕ್ರಮ ಮಧ್ಯ ಸಾಗಾಟ

- Advertisement -
- Advertisement -

ಕಾಸರಗೋಡು: ಪೊಲೀಸ್ ತಪಾಸಣೆಯ ವೇಳೆ ಆಟೋ ರಿಕ್ಷಾ ತೊರೆದು ಚಾಲಕ ಪರಾರಿಯಾಗಿರುವ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಮೂಡಂಬೈಲ್ ಪಜಿಂಗಾರ್ ನಲ್ಲಿ ನಡೆದಿದೆ. ಆಟೋ ರಿಕ್ಷಾವನ್ನು ತಪಾಸಣೆ ನಡೆಸಿದಾಗ 1,050 ಬಾಟಲ್ ಮದ್ಯ ಪತ್ತೆಯಾಗಿದೆ. 22 ಬಾಕ್ಸ್ ಗಳಲ್ಲಿ ಮದ್ಯ ಸಾಗಿಸಲಾಗುತ್ತಿತ್ತು.

ಕರ್ನಾಟಕದಿಂದ ಅಕ್ರಮ ಮದ್ಯ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಜೇಶ್ವರ ಠಾಣಾ ಪೊಲೀಸರು ಮೂಡಂಬೈಲ್ ಸಮೀಪ ಆಟೋ ರಿಕ್ಷಾವನ್ನು ನಿಲ್ಲಿಸಲು ಸೂಚನೆ ನೀಡಿದ್ದು, ಇದೇ ವೇಳೆ ಆತ ಒಳದಾರಿಯಾಗಿ ಪರಾರಿಯಾಗಲೆತ್ನಿಸಿದಾಗ ಪೊಲೀಸರು ಬೆನ್ನಟ್ಟಿದ್ದು, ಪಜಿಂಗಾರ್ ಎಂಬಲ್ಲಿ ತಲಪಿದಾಗ ಆಟೋ ರಿಕ್ಷಾವನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಪರಾರಿಯಾದವನ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಈತ ಕರ್ನಾಟಕದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಿ ಹಲವೆಡೆಗೆ ತಲಪಿಸುತ್ತಿದ್ದ ಎನ್ನಲಾಗಿದೆ.

- Advertisement -

Related news

error: Content is protected !!