- Advertisement -
- Advertisement -
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ಆರ್ಸಿಬಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.
ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ 20 ಓವರ್ಗಳಲ್ಲಿ 6 ವಿಕೆಟ್ಗಳನ್ನು ಕಳೆದುಕೊಂಡು 165 ರನ್ ಗಳಿಸಿತು. ರಾಯಲ್ ಚಾಲೆಂಜರ್ಸ್ ಪರ ಕೊಹ್ಲಿ 51, ಸ್ರಿಕರ್ ಭರತ್ 32, ಮ್ಯಾಕ್ಸ್ವೆಲ 56, ಡಿವಿಲಿಯರ್ಸ್ 11, ಕ್ರಿಶ್ಚಿಯನ್ ಮತ್ತು ಅಹ್ಮದ್ ತಲಾ 1 ರನ್ ಗಳಿಸಿದ್ರೆ ಜಮೇಯ್ಸನ್ 2 ರನ್ ಗಳಿಸಿದ್ರು.
166 ರನ್ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 18.1 ಓವರ್ಗೆ 111 ರನ್ ದಾಖಲಿಸಲಷ್ಟೇ ಶಕ್ತವಾಯ್ತು. ಆರ್ಸಿಬಿಯ ಹರ್ಷಲ್ ಪಟೇಲ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ರು.
- Advertisement -