Monday, July 27, 2026
spot_imgspot_img
spot_imgspot_img

ದ.ಕ. ಎಡಿಟರ್ಸ್ ಕ್ಲಬ್ ಅಧ್ಯಕ್ಷರಾಗಿ ಅಶೋಕ್ ಶೆಟ್ಟಿ ಬಿ ಎನ್, ಪ್ರ. ಕಾರ್ಯದರ್ಶಿ ಮಿತ್ತೂರು ಹಮೀದ್ ಖಂದಕ್ ಆಯ್ಕೆ

- Advertisement -
- Advertisement -

vtv vitla
vtv vitla
vtv vitla

ಮಂಗಳೂರು : ಕಳೆದ 16 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಹಿತರಕ್ಷಣೆಗಾಗಿ ಹಾಗೂ ಅದರ ಸಂಪಾದಕರ ಶ್ರೇಯೋಭಿವೃದ್ಧಿಗಾಗಿ ಕಾರ್ಯಚರಿಸುತ್ತಿರುವ ದ.ಕ. ಎಡಿಟರ್ಸ್ ಕ್ಲಬ್ ಟ್ರಸ್ಟ್ ಇದರ ಅಧ್ಯಕ್ಷರಾಗಿ ಪತ್ರಕರ್ತ ಡಾ. ಅಶೋಕ್ ಶೆಟ್ಟಿ ಬಿ.ಎನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹಾಯ್ ಪುತ್ತೂರು ಪತ್ರಿಕೆಯ ಸಂಪಾದಕ ಮಿತ್ತೂರು ಅಬ್ದುಲ್ ಹಮೀದ್ ಖಂದಕ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಶೇಕ್ ಇಸಾಕ್ ಪುತ್ತೂರು, ಕಾರ್ಯದರ್ಶಿಯಾಗಿ ಹಂಝ ಮೇರ ಮಜಲ್, ಕೋಶಾಧಿಕಾರಿಯಾಗಿ ಹೊನ್ನಯ್ಯ ಹಾಗೂ ಸ್ಥಾಪಕ ಟ್ರಸ್ಟಿಯಾಗಿ ಇಕ್ಬಾಲ್ ಕುತ್ತಾರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಟ್ರಸ್ಟಿನ ಸರ್ವ ಸದಸ್ಯರ ಸಭೆಯಲ್ಲಿ 2021-23ನೇ ಸಾಲಿನ ಪದಾಧಿಕಾರಿಗಳಾಗಿ ಇವರು ಆಯ್ಕೆಯಾಗಿದ್ದು, ಸಭೆಯ ಪ್ರಾರಂಭದಲ್ಲಿ ಇಕ್ಬಾಲ್ ಕುತ್ತಾರ್ ಸ್ವಾಗತಿಸಿ, ವಿವರ ಮಂಡಿಸಿದರು. ಕೊನೆಯಲ್ಲಿ ಮಿತ್ತೂರು ಹಮೀದ್ ಖಂದಕ್ ಧನ್ಯವಾದ ಸಲ್ಲಿಸಿದರು.

vtv vitla

- Advertisement -

Related news

error: Content is protected !!