Thursday, September 24, 2026
spot_imgspot_img
spot_imgspot_img

ಕಡಬ: ಆಕಸ್ಮಿಕವಾಗಿ ಬೆಂಕಿ ಬಿದ್ದು ಹೊತ್ತಿ ಉರಿದ ಗುಡ್ಡ..!

- Advertisement -
- Advertisement -

ಕಡಬ: ಆಕಸ್ಮಿಕವಾಗಿ ಬೆಂಕಿ ಬಿದ್ದು ಗಾಳಿಯ ರಭಸಕ್ಕೆ ಗುಡ್ಡ ಪ್ರದೇಶ ಧಗಧಗನೆ ಹೊತ್ತಿ ಉರಿದ ಘಟನೆ ಕಳಾರ ವಾಹನ ಶೋರೂಂ ಒಂದರ ಸಮೀಪ ಫೆ.14ರ ಮಧ್ಯಾಹ್ನ ನಡೆದಿದೆ.

ಟ್ರಾನ್ಸ್ ಫಾರ್ಮರಿನಿಂದ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುತ್ತ ಮುತ್ತಲಿನ ಹುಲ್ಲು ತುಂಬಿದ ಪ್ರದೇಶಕ್ಕೆ ಬೆಂಕಿ ಹಬ್ಬಿ ಗುಡ್ಡಕ್ಕೆ ಆವರಿಸಿಕೊಂಡಿದೆ. ಸ್ಥಳೀಯರು ಕೂಡಲೇ ಠಾಣೆಗೆ ಮಾಹಿತಿ ನೀಡಿದ್ದು ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುಡ್ಡಕ್ಕೆ ಬೆಂಕಿ ಆವರಿಸಿದ ಹಿನ್ನೆಲೆ ಪೊಲೀಸರು ಸಹಿತ ಸ್ಥಳದಲ್ಲಿದ್ದವರು ತುರ್ತು ಸಂದರ್ಭದಲ್ಲಿ 112 ಸಹಾಯವಾಣಿಗೆ ಕರೆ ಮಾಡಿದರೂ ಕರೆ ಸ್ವೀಕಾರವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

- Advertisement -

Related news

error: Content is protected !!