Friday, September 4, 2026
spot_imgspot_img
spot_imgspot_img

ಪುತ್ತೂರು: ಪತ್ರಕರ್ತರ ಸಂಘದಿಂದ ಅನೀಶ್ ಕುಮಾರ್ ಔಟ್!

- Advertisement -
- Advertisement -

ಪುತ್ತೂರು: ವಾರ್ತಾ ಇಲಾಖೆಯ ಕಟ್ಟಡ ದುರ್ಬಳಕೆ ಮಾಡಿದ ಆರೋಪದಲ್ಲಿ ಪುತ್ತೂರು ತಾಲೂಕು ಪತ್ರರ್ಕರ ಸಂಘದ ಉಪಾಧ್ಯಕ್ಷ ಅನೀಶ್ ಕುಮಾರ್ ಅವರ ಉಪಾಧ್ಯಕ್ಷ ಸ್ಥಾನವನ್ನು ಬರ್ಕಾಸ್‌ಗೊಳಿಸಿ ಸದಸ್ಯ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಪುತ್ತೂರು ತಾಲೂಕು ಪತ್ರರ್ಕರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್‍ ನಾಳ ಆದೇಶ ಹೊರಡಿಸಿದ್ದಾರೆ.

ಕಳೆದ 25 ವರ್ಷಗಳಿಂದ ಪುತ್ತೂರು ತಾಲೂಕು ಪತ್ರಕರ್ತರ ಸಂಘವು ಹಿರಿಯ ಸದಸ್ಯ ಪತ್ರಕರ್ತರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದು, ವಾರ್ತಾ ಇಲಾಖೆಯ ಕಟ್ಟಡದಲ್ಲಿ ಕಳೆದ 16-17 ವರ್ಷಗಳಿಂದ ಪ್ರೆಸ್‌ಕ್ಲಬ್ ಕಾರ್ಯನಿರ್ವಹಿಸುತ್ತಿದೆ. ಆದರೆ ಕೆಲವು ಸದಸ್ಯರು ಪ್ರೆಸ್‌ಕ್ಲಬ್ ಕಟ್ಟಡವನ್ನು ದುರ್ಬಳಕೆ ಮಾಡುತ್ತಿದ್ದು, ಹಲವು ಬಾರಿ ಎಚ್ಚರಿಕೆ ನೀಡಿದರೂ ಯಥಾವತ್ತಾಗಿ ದುರ್ಬಳಕೆಯಾಗುತ್ತಿದೆ. ಮಾನ್ಯ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ, ಜಿಲ್ಲಾ ವಾರ್ತಾ ಅಧಿಕಾರಿಗಳು ವಾರ್ತಾ ಇಲಾಖೆಯ ಕಟ್ಟಡ ದುರ್ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನವನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಜಾರಿಬರುವಂತೆ ಪುತ್ತೂರು ತಾಲೂಕು ಪತ್ರರ್ಕರ ಸಂಘದ ಉಪಾಧ್ಯಕ್ಷ ಅನೀಶ್ ಕುಮಾರ್ ಅವರ ಉಪಾಧ್ಯಕ್ಷ ಸ್ಥಾನವನ್ನು ಬರ್ಕಾಸ್‌ಗೊಳಿಸಿ, ಪುತ್ತೂರು ತಾಲೂಕು ಪತ್ರರ್ಕರ ಸಂಘ(ರಿ.)ನ ಸದಸ್ಯ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ.

ಮುಂದಿನ ಅದೇಶದವರೆಗೂ ಪತ್ರಕರ್ತ ಅನೀಶ್ ಕುಮಾರ್ ಅವರಿಗೂ ಪುತ್ತೂರು ತಾಲೂಕು ಪತ್ರರ್ಕರ ಸಂಘಕ್ಕೂ ಯಾವುದೇ ಸಂಭಂಧ ಇರುವುದಿಲ್ಲ, ಪುತ್ತೂರು ತಾಲೂಕು ಪತ್ರರ್ಕರ ಸಂಘದ ಸದಸ್ಯರು/ ಸಾರ್ವಜನಿಕರು ಪತ್ರಕರ್ತ ಅನೀಶ್ ಕುಮಾರ್ ಜತೆ ಸಂಘದ ಹೆಸರಲ್ಲಿ ಯಾವುದೇ ವ್ಯವಹಾರ ಹೊಂದಿದರೆ ಅದಕ್ಕೆ ಸಂಘ ಜವಾಬ್ದಾರರಲ್ಲ. ಪತ್ರಕರ್ತ ಎಂಬ ನೆಲೆಯಲ್ಲಿ ಪುತ್ತೂರು ತಾಲೂಕು ಪತ್ರರ್ಕರ ಸಂಘದ ಅಧೀನದ ಪ್ರೆಸ್‌ಕ್ಲಬ್‌ನಲ್ಲಿ ನಡೆಯುವ ಸುದ್ದಿಗೋಷ್ಟಿ ಕಾರ್ಯಕ್ರಮಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಮುಂದೆ ನಡೆಯಲಿರುವ ಪುತ್ತೂರು ತಾಲೂಕು ಪತ್ರರ್ಕರ ಸಂಘದ ಸಭೆಯ ವರೆಗೆ ಪತ್ರಕರ್ತ ಅನೀಶ್ ಕುಮಾರ್ ಅವರು ಪ್ರೆಸ್‌ಕ್ಲಬ್‌ನ್ನು ಯಾವುದೇ ರೀತಿಯಲ್ಲಿ ಬಳಸದಂತೆ ಸೂಚಿಸಿದೆ. ತಪ್ಪಿದ್ದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಪುತ್ತೂರು ತಾಲೂಕು ಪತ್ರರ್ಕರ ಸಂಘ(ರಿ) ನಿರ್ಧರಿಸಿದೆ.

- Advertisement -

Related news

error: Content is protected !!