Sunday, June 29, 2025
spot_imgspot_img
spot_imgspot_img

“ಕಿಚ್ಚ ಸುದೀಪ್‌ಗೆ ಕಪಿಲ್ ದೇವ್ ಕಡೆಯಿಂದ ವಿಶೇಷ ಗಿಫ್ಟ್”

- Advertisement -
- Advertisement -

ಕ್ರಿಕೆಟ್‌ನೊಂದಿಗೆ ಉತ್ತಮ ನಂಟು ಹೊಂದಿರುವ ಕಿಚ್ಚ ಸುದೀಪ್. ಸದ್ಯ `ವಿಕ್ರಾಂತ್ ರೋಣ’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸುದೀಪ್ ಗೆ ಕಪಿಲ್ ದೇವ್ ಕಡೆಯಿಂದ ಬಿಗ್ ಗಿಫ್ಟ್ವೊಂದು ಲಭ್ಯವಾಗಿದೆ.

ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಕಡೆಯಿಂದ ಕಿಚ್ಚನಿಗೆ ವಿಶೇಷ ಉಡುಗೊರೆ ಬಂದಿದೆ. ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ಪ್ಯಾನ್ ಇಂಡಿಯಾ ಸಿನಿಮಾ `ವಿಕ್ರಾಂತ್ ರೋಣ’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಮಧ್ಯೆ ಸುದೀಪ್‌ಗೆ ಅತ್ಯಂತ ಸ್ಮರಣೀಯ ಬ್ಯಾಟ್‌ಅನ್ನು ಉಡುಗೊರೆಯಾಗಿ ಕಪಿಲ್‌ದೇವ್ ನೀಡಿದ್ದಾರೆ.

1983ರಲ್ಲಿ ವಿಶ್ವ ಕಪ್ ಪಂದ್ಯದಲ್ಲಿ 175 ಸೆಂಚುರಿ ಬಾರಿಸಿದ್ದ ಕಪಿಲ್, ಆ ಬ್ಯಾಟ್ ಅನ್ನೇ ವಿಶೇಷವಾಗಿ ಉಡುಗೊರೆ ನೀಡಿದ್ದಾರೆ. ಬ್ಯಾಟ್ ಮೇಲೆ ಕಪಿಲ್ ದೇವ್ ಜತೆ ಎಲ್ಲಾ ಆಟಗಾರರ ಸಹಿ ಇರೋದು ವಿಶೇಷ. ಕ್ರಿಕೆಟ್ ಮೇಲೆ ಅಷ್ಟೇ ಕಿಚ್ಚನಿಗೆ ಒಲವು ಇರೋದಲ್ಲ, ಕ್ರಿಕೆಟ್ ಕ್ಷೇತ್ರದ ಆಟಗಾರರ ಜತೆಯೂ ಉತ್ತಮ ಬಾಂದವ್ಯ ಹೊಂದಿದ್ದಾರೆ ಎಂಬುದಕ್ಕೆ ಇದೇ ತಾಜಾ ಉದಾಹರಣೆಯಾಗಿದೆ. ಸದ್ಯ ಟ್ರೇಲರ್‌ನಿಂದ ಸದ್ದು ಮಾಡುತ್ತಿರುವ `ವಿಕ್ರಾಂತ್ ರೋಣ’ ಇದೇ ಜುಲೈ 28ಕ್ಕೆ ತೆರೆಗೆ ಅಪ್ಪಳಿಸಲಿದೆ

- Advertisement -

Related news

error: Content is protected !!