Wednesday, June 24, 2026
spot_imgspot_img
spot_imgspot_img

ಆರ್ಥಿಕ ಲಾಭಕ್ಕಾಗಿ ಇಬ್ಬರು ಮಹಿಳೆಯನ್ನು ನರಬಲಿ ಕೊಟ್ಟ ದಂಪತಿ

- Advertisement -
- Advertisement -

ಕೇರಳ: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರು ಕೇರಳದ ತಿರುವಲ್ಲಾದಲ್ಲಿ ನರಬಲಿ ಶಂಕಿತ ಪ್ರಕರಣದಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯಾದವರನ್ನು ಪದ್ಮ ಮತ್ತು ರೋಸ್ಲಿನ್ ಎಂದು ಗುರುತಿಸಲಾಗಿದೆ.

ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೀಲಾ ಮತ್ತು ಏಜೆಂಟ್ ಶಿಹಾಬ್ ಕೊಲೆಗೈವರಾಗಿದ್ದು, ಎರ್ನಾಕುಲಂನಿಂದ ಇಬ್ಬರು ಮಹಿಳೆಯರನ್ನು ಅಪಹರಿಸಿ ದಂಪತಿಯ ಮನೆಗೆ ಕರೆತಂದಿರುವ ಶಂಕೆ ವ್ಯಕ್ತವಾಗಿದೆ.

ಪದ್ಮಾ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದ್ದು, ಆಕೆಯನ್ನು ತಿರುವಲ್ಲಾದ ಆ ದಂಪತಿ ಮನೆಯಲ್ಲಿ ಕೊಂದು ಅವಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಹೂಳಲಾಗಿದ್ದು, ಜೂನ್‌ನಲ್ಲಿ ಅದೇ ಮನೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ನರ ಬಲಿ ನೀಡಿರುವ ಬಗ್ಗೆ ದಂಪತಿಗಳು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!