Saturday, July 25, 2026
spot_imgspot_img
spot_imgspot_img

ಕಾಸರಗೋಡು: ಅಪಘಾತಕ್ಕೀಡಾದ ಸ್ಕೂಟರ್‌‌ನಿಂದ 18 ಕಿಲೋ ಗಾಂಜಾ ವಶಕ್ಕೆ; ಆರೋಪಿಯ ಬಂಧನ..!

- Advertisement -
- Advertisement -

ಕಾಸರಗೋಡು: ಅಪಘಾತ ಕ್ಕೀಡಾದ ಸ್ಕೂಟರ್‌‌ನಿಂದ 18 ಕಿಲೋ ಗಾಂಜಾವನ್ನು ಮಂಜೇಶ್ವರ ಠಾಣಾ ಪೊಲೀಸರು ವಶಡಿಸಿಕೊಂಡಿದ್ದು, ತಮಿಳುನಾಡು ಮೂಲದ ಯುವಕನೋರ್ವನನ್ನು ಬಂಧಿಸಲಾಗಿದೆ.

ತಮಿಳುನಾಡು ತಿರುವಲ್ಲೂರಿನ ಅಂತೋನಿ ರಾಜು (26) ಬಂಧಿತ.

ಉಪ್ಪಳದಲ್ಲಿ ಗುರುವಾರ ರಾತ್ರಿ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಸ್ಕೂಟರ್ ಮಗುಚಿ ಬಿದ್ದಿದ್ದು, ಸ್ಥಳೀಯರು ದಾವಿಸಿ ಬಂದು ನೋಡಿದಾಗ ಎರಡು ಗೋಣಿ ಚೀಲಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದ ಗಾಂಜಾ ಪತ್ತೆಯಾಗಿದೆ.

ಇನ್ನು ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಪೊಲೀಸರು ಸ್ಕೂಟರ್ ಮತ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದು, ಆರೋಪಿ ಯನ್ನು ಬಂಧಿಸಿದ್ದಾರೆ.

ಹೊಸಂಗಡಿಯ ಕಿರಣ್ ಎಂಬಾತ ಗಾಂಜಾ ನೀಡಿದ್ದು, ಕಲ್ಲಿ ಕೋಟೆಗೆ ತಲುಪಿಸಲು ಹೇಳಿದ್ದಾಗಿ ಈತ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

- Advertisement -

Related news

error: Content is protected !!