Wednesday, July 22, 2026
spot_imgspot_img
spot_imgspot_img

ವಿಟ್ಲ: ಜ(20) ಜಾತ್ರಾ ಮಹೋತ್ಸವದ ಪ್ರಯುಕ್ತ VRC ವಿಟ್ಲ ಇವರ ಆಶ್ರಯದಲ್ಲಿ ರಮಾನಾಥ ವಿಟ್ಲ ಸಾರಥ್ಯದಲ್ಲಿ 33ನೇ ವರ್ಷದ “ವಿಟ್ಲೋತ್ಸವ-2026” ಹಾಗೂ ವಿಜಯ್ ಕುಮಾರ್‍ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ “ಛತ್ರಪತಿ ಶಿವಾಜಿ” ನಾಟಕ ಪ್ರದರ್ಶನ

- Advertisement -
- Advertisement -

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಜಾತ್ರಾ ಮಹೋತ್ಸವ ಬಹಳ ವೈಭವದಿಂದ ನಡೆಯುತ್ತಿದ್ದು, ಈ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಗಿ ದಿನಾಂಕ 20ರಂದು ವಿಟ್ಲ ಸರಕಾರಿ ಮಾದರಿ ಶಾಲಾ ವಠಾರದಲ್ಲಿ VRC ವಿಟ್ಲ ಆಶ್ರಯದ ರಮನಾಥ ವಿಟ್ಲ ಸಾರಥ್ಯದಲ್ಲಿ 33 ನೇ ವರ್ಷದ ” ವಿಟ್ಲೋತ್ಸವ” ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಶೋಕ್ ಕುಮಾರ್‍ ರೈ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ , ವಿ. ಮನೋಹರ್‍ ಸಾಹಿತಿ ಮತ್ತು ಸಂಗಿತ ನಿರ್ದೇಶಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಲಕ್ಷೀ ಗಾಣಿಗ ಈಜುಪಟು, ಚರಿತ ಅಮಿನ್ ಕೆ ಈಜುಪಟು, ತೀರ್ಥೆಶ್ ಕಬಡ್ಡಿಪಟು, ತರುಣ್ ಕೃಷ್ಣ ಜಿ.ಎಸ್
ಕಬಡ್ಡಿಪಟು, ಮೊಹಮ್ಮದ್ ಶಾಹಿಲ್ ಕಬಡ್ಡಿಪಟು ಪುರಸ್ಕ್ರತಗೊಳ್ಳುವರು.

ಸಂಜೆ 7 ಗಂಟೆಗೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರು ಅರ್ಪಿಸುವ ‘ಶಿವದೂತೆ ಗುಳಿಗೆ’ ನಾಟಕ ಖ್ಯಾತಿಯ ತಂಡದಿಂದ ‘ಛತ್ರಪತಿ ಶಿವಾಜಿ’ ನಾಟಕ ಪ್ರದರ್ಶನವು ನಡೆಯಲಿದೆ.

- Advertisement -

Related news

error: Content is protected !!