Monday, August 10, 2026
spot_imgspot_img
spot_imgspot_img

ಯುವಕನೋರ್ವನಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ

- Advertisement -
- Advertisement -

ಬೆಂಗಳೂರು: ಯುವಕನೋರ್ವನಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರಹಳ್ಳಿಯ ಬಾರ್‌ವೊಂದರಲ್ಲಿ ನಡೆದಿದೆ.

ಸುಬ್ರಹ್ಮಣ್ಯಪುರದ ರೌಡಿಶೀಟರ್ ಶಿವರಾಜ್ ನನ್ನು ಹತ್ಯೆ ಮಾಡಲಾಗಿದೆ. ಬಿಯರ್ ಬಾಟಲಿನಿಂದ ತಲೆಗೆ ಹೊಡೆದು ಮತ್ತೊಬ್ಬ ರೌಡಿಶೀಟರ್ ಮಂಜ ಕೊಲೆ ಮಾಡಿದ್ದಾನೆ. ಉತ್ತರಹಳ್ಳಿಯ ಬಾರ್ ವೊಂದರಲ್ಲಿ ರೌಡಿಶೀಟರ್ ಗಳು ಇಬ್ಬರೂ ಪಾನಮತ್ತರಾಗಿದ್ದರು. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಮಂಜ, ಶಿವರಾಜ್ ನ ತಲೆಗೆ ಬಿಯರ್ ಬಾಟಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಶಿವರಾಜ್​ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಮಾರ್ಗ ಮಧ್ಯೆ ಸಾವನಪ್ಪಿದ್ದು, ಈ ಕುರಿತು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಆರೋಪಿ ಮಂಜ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮಂಜು ಮತ್ತು ಮೃತ ಶಿವರಾಜ್​ ಜೊತೆ ಈ ಹಿಂದೆ ಸಣ್ಣಪುಟ್ಟ ಗಲಾಟೆ ಇತ್ತು ಎನ್ನಲಾಗಿದೆ. ನಿನ್ನೆ ರಾತ್ರಿ ರೌಡಿ ಶೀಟರ್ ಶಿವರಾಜ್ ತನ್ನ ಮೂವರು ಗೆಳೆಯರ ಜೊತೆಗೆ ಇಟ್ಟಮಾಡು ರೋಡ್​ನಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್​ಗೆ ಹೋಗಿದ್ದ. ಕುಡಿದ ನಂತರ ಮಂಜನ ಜೊತೆಗೆ ಗಲಾಟೆ ಆಗಿದೆ. ಮಾತು ಮಾತಿಗೆ ಶುರುವಾದ ಗಲಾಟೆಯಲ್ಲಿ ಅರೋಪಿ ಮಂಜುಗೆ ಶಿವರಾಜ್ ಅಂಡ್ ಟೀಮ್ ಹಲ್ಲೆ ಮಾಡಿದ್ದು, ಹೊಡೆದು ಬಾರ್ ನಿಂದ ಹೊರಕ್ಕೆ ಕಳುಸಿದ್ದಾರೆ. ಬಾರ್​​ನಿಂದ ಹೊರ ಬಂದು ನಿಂತ ಮಂಜು ಜೊತೆಗೆ ನಾಲ್ಕರಿಂದ ಐದು ಜನರು ಸೇರಿಕೊಂಡಿದ್ದಾರೆ. ಮೊದಲಿಗೆ ಬಿಯರ್ ಬಾಟಲ್​ನಿಂದ ಹೊಡೆದಾಡಿದ್ದಾರೆ. ನಂತರ ರಸ್ತೆ ಬದಿಯ ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ. ಪರಿಣಾಮ ರಸ್ತೆ ಬದಿಯಲ್ಲಿ ಶಿವರಾಜ್ ಬಿದ್ದಿದ್ದಾನೆ. ಘಟನೆ ಸಂಬಂದ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!