Tuesday, May 7, 2024
spot_imgspot_img
spot_imgspot_img

ಗೃಹಪ್ರವೇಶಕ್ಕೆ ರಜೆ ನೀಡಲಿಲ್ಲವೆಂದು ಉಪ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ

- Advertisement -G L Acharya panikkar
- Advertisement -

ಹೊಸ ಮನೆಯ ಗೃಹಪ್ರವೇಶಕ್ಕೆ ಹಾಜರಾಗಲು ರಜೆ ನಿರಾಕರಿಸಿದ ಹಿನ್ನೆಲೆಯಲ್ಲಿ ಮನನೊಂದ ಉಪ ಜಿಲ್ಲಾಧಿಕಾರಿ ನಿಶಾ ಬೇಂಗ್ರೆ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಉಪ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ನಿಶಾ ಬೇಂಗ್ರೆ ಬೌದ್ಧ ಧರ್ಮಕ್ಕೆ ಸೇರಿದವರಾಗಿದ್ದಾರೆ. ಜೂನ್ 25 ರಂದು ಬೆತುಲ್‌ನ ಆಮ್ಲಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸರ್ವ ಧರ್ಮ ಶಾಂತಿ ಸಮ್ಮೇಳನ ಮತ್ತು ವಿಶ್ವ ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಗೃಹಪ್ರವೇಶವೆಂದು ಹೇಳಿ ರಜೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇವರಿಗೆ ರಜೆ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ

ರಾಜೀನಾಮೆ ಪತ್ರದಲ್ಲಿ, ಜೂನ್ 25 ರಂದು ತನ್ನ ಹೊಸ ಮನೆಯ ಉದ್ಘಾಟನಾ ಕಾರ್ಯಕ್ರಮವಿತ್ತು ಆದರೆ ರಜೆ ನಿರಾಕರಿಸಲಾಗಿದೆ. ಹೀಗಾಗಿ ನನಗೆ ತೀವ್ರ ನೋವಾಗಿದೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ತಮ್ಮ ಊರಿನಲ್ಲಿ ನಡೆಯುವ ಖಾಸಗಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಿದ್ದಕ್ಕೆ ತೀವ್ರ ನೋವಾಗಿದೆ. ನನ್ನ ಮೂಲಭೂತ ಹಕ್ಕುಗಳು, ಧಾರ್ಮಿಕ ನಂಬಿಕೆಗಳು ಮತ್ತು ಸಂವಿಧಾನಿಕ ಮೌಲ್ಯಗಳಿಗೆ ರಾಜಿ ಮಾಡಿಕೊಳ್ಳುವ ಮೂಲಕ ಡೆಪ್ಯೂಟಿ ಕಲೆಕ್ಟರ್ ಹುದ್ದೆಯಲ್ಲಿ ಮುಂದುವರಿಯುವುದು ಸೂಕ್ತವಲ್ಲ. ಅದಕ್ಕಾಗಿಯೇ ನಾನು ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ.ಸ್ಥಳೀಯ ಮಾಧ್ಯಮದವರೊಂದಿಗೆ ಮಾತನಾಡಿದ ಬೇಂಗ್ರೆ, ಅಧಿಕಾರಿಗಳು ಇನ್ನೂ ರಾಜೀನಾಮೆ ಪತ್ರವನ್ನು ಅಂಗೀಕರಿಸಿಲ್ಲ. ರಾಜಕೀಯ ಕಾರಣಗಳಿಂದಾಗಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತನಗೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾ

- Advertisement -

Related news

error: Content is protected !!