Tuesday, August 18, 2026
spot_imgspot_img
spot_imgspot_img

ವಿಟ್ಲ : ದ್ವಿಚಕ್ರ ವಾಹನ ಮತ್ತು ಪಿಕಪ್‌ ನಡುವೆ ಅಪಘಾತ: ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ವಿಟ್ಲ : ದ್ವಿಚಕ್ರ ವಾಹನ ಮತ್ತು ಪಿಕಪ್‌ ನಡುವೆ ಅಪಘಾತ ಸಂಭವಿಸಿ, ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡ ಘಟನೆ ವೀರಕಂಭ ಗ್ರಾಮದ ಮಚ್ಚ ಎಂಬಲ್ಲಿ ನಡೆದಿದೆ.

ವಿಟ್ಲ ಕಸಬಾ ಗ್ರಾಮದ ಪೊನ್ನತ್ತಡಿ ನಿವಾಸಿ ಹೊನ್ನಪ್ಪ ಗೌಡರವರ ಅಣ್ಣನ ಮಗನಾದ ಶೋಬಿತ್‌ ಕುಮಾರು ಪಿ ರವರು KA.19.HP.0413 ನೇ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು, ವಿಟ್ಲ ದಿಂದ ಮಂಗಲಪದವಿನ ಪೊನ್ನೆತ್ತಡಿ ಕಡೆಗೆ ಹೋಗುತ್ತಾ, ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಚ್ಚ ಎಂಬಲ್ಲಿ ತಲುಪಿದಾಗ, ಅವರ ಎದುರಿನಿಂದ ಬರುತ್ತಿದ್ದ KA.19.D.5506 ನೇ ಪಿಕ್ ಆಪ್ ವಾಹನವನ್ನು ಅದರ ಚಾಲಕ ಕೆ ವಸಂತ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು, ಶೋಬಿತ್‌ ಕುಮಾರು ಪಿ ರವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪಘಾತಪಡಿಸಿರುತ್ತಾರೆ. ಪರಿಣಾಮ ಶೋಬಿತ್‌ ಕುಮಾರು ಪಿ ರವರು ಕೆಳಗೆ ಬಿದ್ದು, ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 115/2024 ಕಲಂ: 281, 125(ಎ) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!