Friday, April 26, 2024
spot_imgspot_img
spot_imgspot_img

*ಕೊರೋನಾ ವೇಳೆಯಲ್ಲೂ ದೇಶದ ಕೃಷಿ ರಫ್ತು ಹೆಚ್ಚಳ-ಪ್ರಧಾನಿ ಮೋದಿ*

- Advertisement -G L Acharya panikkar
- Advertisement -

ನವದೆಹಲಿ: ಕೊರೋನಾದಿಂದ ವಿಶ್ವದ ಎಲ್ಲ ದೇಶಗಳೂ ಉತ್ಪಾದನೆ, ಉತ್ಪನ್ನಗಳ ಸರಬರಾಜು ಸೇರಿ ಎಲ್ಲ ಕ್ಷೇತ್ರಗಳೂ ಸಮಸ್ಯೆ ಎದುರಿಸುತ್ತಿವೆ. ಇದಕ್ಕೆ ಭಾರತ ಕೂಡ ಹೊರತಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ಕೆನಡಾದಲ್ಲಿ ನಡೆದ ಇನ್ವೆಸ್ಟ್ ಇಂಡಿಯಾ ವರ್ಚುಯಲ್ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೊರೋನಾ ಸೃಷ್ಟಿಸಿದ ಹಲವು ಸಮಸ್ಯೆಗಳ ನಡುವೆಯೂ ಭಾರತ ಆಶಾದಾಯಕ ಪ್ರಗತಿ ಸಾಧಿಸಿದೆ. ಮಾರ್ಚ್ ಹಾಗೂ ಜೂನ್ ತಿಂಗಳ ಅವಧಿಯಲ್ಲಿ ಕೃಷಿ ರಫ್ತು ಶೇ.23 ರಷ್ಟು ಹೆಚ್ಚಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಸರಳೀಕರಣಗೊಳಿಸಲಾಗಿದೆ ಎಂದು ಮೋದಿ ಹೇಳಿದರು.


ಭಾರತ-ಕೆನಡಾ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ. ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಸಾಮಾನ್ಯ ಹಿತಾಸಕ್ತಿಗಳಿಂದ ನಮ್ಮ ವ್ಯವಹಾರ ನಡೆಯುತ್ತಿದೆ. ನಮ್ಮ ನಡುವಿನ ವ್ಯಾಪಾರ ಮತ್ತು ಹೂಡಿಕೆ ಭಾರತ ಹಾಗೂ ಕೆನಡಾ ಸಂಬಂಧಕ್ಕೆ ಅವಿಭಾಜ್ಯವಾಗಿವೆ. ಭಾರತದಲ್ಲಿ ಅತೀ ಹೆಚ್ಚು ಹೂಡಿಕೆ ಮಾಡಿದ ವಿದೇಶಗಳ ಪೈಕಿ ಕೆನಡಾ 20ನೇ ಸ್ಥಾನದಲ್ಲಿದೆ ಎಂದು ಮೋದಿ ಹೇಳಿದರು.

- Advertisement -

Related news

error: Content is protected !!