Saturday, August 22, 2026
spot_imgspot_img
spot_imgspot_img

ಕಂಬಳಬೆಟ್ಟು ದ ಕ ಜಿ ಪಂ ಹಿ ಪ್ರಾ ಶಾಲೆಯಲ್ಲಿ ಮಾದಕ ವಸ್ತುಗಳ ದುರುಪಯೋಗ ತಡೆ ಹಾಗೂ ಸಮೂಹ ಮಾಧ್ಯಮಗಳು ಮತ್ತು ಅಂತರ್ಜಾಲದ ಸುರಕ್ಷಿತ ಬಳಕೆ ಕುರಿತು ಮಾಹಿತಿ ಕಾರ್ಯಗಾರ

- Advertisement -
- Advertisement -

ಕಂಬಳಬೆಟ್ಟು: ದ ಕ ಜಿ ಪಂ ಹಿ ಪ್ರಾ ಶಾಲೆ, ಕಂಬಳಬೆಟ್ಟು ಇಲ್ಲಿ ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ ಹಾಗೂ ಸಮೂಹ ಮಾಧ್ಯಮಗಳು ಮತ್ತು ಅಂತರ್ಜಾಲದ ಸುರಕ್ಷಿತ ಬಳಕೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ನಡೆಯಿತು.

ಮಾದಕ ವಸ್ತುಗಳ ದುರುಪಯೋಗದಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಅದನ್ನು ತಡೆಗಟ್ಟುವ ಕ್ರಮಗಳ ಕುರಿತು ವಿಟ್ಲ ಠಾಣೆಯ ಪಿಎಸ್ಐ ರತನ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಶ್ರೀಮತಿ ಜ್ಯೋತಿ ಸಮೂಹ ಸಂಪನ್ಮೂಲ ವ್ಯಕ್ತಿ ಕಂಬಳಬೆಟ್ಟು ಕ್ಲಸ್ಟರ್‌, ಮಾತನಾಡಿ ಶಾಲೆಯಿಂದ 100 ಮೀಟರ್ ಅಂತರದೊಳಗೆ ಯಾವುದೇ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ನಡೆಯಬಾರದು ಎಂಬ ಸರ್ಕಾರದ ಸುತ್ತೋಲೆಯ ಬಗ್ಗೆ ವಿವರಿಸಿದರು. ಈ ಕುರಿತು ಶಾಲಾ ಆವರಣದಲ್ಲಿ ಈಗಾಗಲೇ ನೋಟೀಸ್ ಹಾಕಲಾಗಿದೆ. ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ – SDMC ಅಧ್ಯಕ್ಷರು ಮತ್ತು ಸದಸ್ಯರು ಹೆಚ್ಚು ಜಾಗರೂಕರಾಗಿರಬೇಕು. ಶಾಲೆಯ ಸುತ್ತಮುತ್ತಲಿನ ಅಂಗಡಿಗಳನ್ನು ಪರಿಶೀಲಿಸಿ, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ಸಮೂಹ ಮಾಧ್ಯಮಗಳು ಹಾಗೂ ಅಂತರ್ಜಾಲವನ್ನು ಜವಾಬ್ದಾರಿಯುತವಾಗಿ ಮತ್ತು ಸುರಕ್ಷಿತವಾಗಿ ಬಳಸುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹಮೀದ್ ಕೆ. ಎಸ್. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀಪತಿ ನಾಯಕ್ ಡಿ. ಅವರು ಸ್ವಾಗತಿಸಿ, ವಂದಿಸಿದರು.

- Advertisement -

Related news

error: Content is protected !!