Monday, July 20, 2026
spot_imgspot_img
spot_imgspot_img

ಪುತ್ತೂರು: ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಯ ಸಹಿ ಪೋರ್ಜರಿ ಪ್ರಕರಣ

- Advertisement -
- Advertisement -

ಈ ಬಗ್ಗೆ ಮಾತನಾಡಲು ಕಾಂಗ್ರೇಸ್ ಮುಖಂಡ ಯಾರು? ಅಧಿಕಾರಿ ಬಗ್ಗೆ ಅವರೆಲ್ಲಾ ಮಾತನಾಡುವಂತಿಲ್ಲ-ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಯ ಸಹಿ ಪೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಶೋಕ್ ಕುಮಾರ್ ರೈ ಪ್ರತಿಕ್ರಿಯೆ ನೀಡಿದ್ದಾರೆ.

ಅಧಿಕಾರಿಯ ಸಹಿ ಪೋರ್ಜರಿ ವಿಚಾರ ಗಮನಕ್ಕೆ ಬಂದಿದೆ, ಅಧಿಕಾರಿಗೆ ಪೋಲೀಸ್ ದೂರು‌ ನೀಡಲು ಹೇಳಿದ್ದೇನೆ. ಆದರೆ ಈವರೆಗೆ ದೂರು‌ ನೀಡದಿರಲು ಕಾರಣ ಏನು ಎಂದು ತಿಳಿದಿಲ್ಲ. ಸಹಿ‌ ಪೋರ್ಜರಿಯಾಗಿದೆ ಎಂದು ತಿಳಿದ ತಕ್ಷಣ ಅನುಮತಿ ಪತ್ರವನ್ನು ರದ್ದುಗೊಳಿಸಿದ್ದಾಗಿ ಅಧಿಕಾರಿ ತಿಳಿಸಿದ್ದಾರೆ.ಪೋಲೀಸ್ ದೂರು‌ ಕೊಡೋದು ಅವರಿಗೆ ಬಿಟ್ಟ ವಿಚಾರ, ದೂರು ಕೊಡದೇ ಹೋದಲ್ಲಿ ಅಧಿಕಾರಿಯ ವಿರುದ್ಧ ತನಿಖೆ ಆಗುತ್ತೆ, ಆತ ಸಸ್ಪೆಂಡ್ ಆಗುತ್ತಾನೆ, ಈ ವಿಚಾರದ ಬಗ್ಗೆ ಕಾಂಗ್ರೇಸ್ ಮುಖಂಡ ಮಹಮ್ಮದ್ ಆಲಿ ಪತ್ರಿಕಾ ಗೋಷ್ಠಿ ನಡೆಸಿ ಅಧಿಕಾರಿಯನ್ನು ಅಮಾನತು ಗೊಳಿಸುವಂತೆ ಹೇಳಿಕೆ ನೀಡಿದ್ದರು.

ಈ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು ಕಾಂಗ್ರೆಸ್ ಮುಖಂಡರು ಈ ಬಗ್ಗೆ ಮಾತನಾಡುವಂತಿಲ್ಲ. ಈ ಬಗ್ಗೆ ಮಾತನಾಡಲು ಕಾಂಗ್ರೇಸ್ ಮುಖಂಡ ಯಾರು? ಅಧಿಕಾರಿ ಬಗ್ಗೆ ಅವರೆಲ್ಲಾ ಮಾತನಾಡುವಂತಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಖಡಕ್ ಉತ್ತರ ನೀಡಿದ್ದಾರೆ.

- Advertisement -

Related news

error: Content is protected !!