Sunday, November 1, 2026
spot_imgspot_img
spot_imgspot_img

ಉಳ್ಳಾಲ: ATM ನಿಂದ ಹಣ ಕಳ್ಳತನಕ್ಕೆ ಯತ್ನ; ಆರೋಪಿಯ ಬಂಧನ

- Advertisement -
- Advertisement -

ಉಳ್ಳಾಲ:  ಕೋಟೆಕಾರು ಬೀರಿ ಎಟಿಎಂನಲ್ಲಿ ತಡರಾತ್ರಿ ಹಣ ಕದಿಯಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ದೆಹಲಿಯ ಕಣ್ಗಾವಲು ವ್ಯವಸ್ಥೆಯ ಎಚ್ಚರಿಕೆಯ ಮೇರೆಗೆ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿಯ ನಿವಾಸಿ ನಾಗಪ್ಪ ಕೇರಳಟ್ಟಿ (41) ಎಂದು ಗುರುತಿಸಲಾಗಿದೆ.ನಾಗಪ್ಪ (41) ಎಂಬಾತನನ್ನು ಮುಂಜಾನೆ 3 ಗಂಟೆ ಸುಮಾರಿಗೆ ಎಸ್‌ಬಿಐ ಎಟಿಎಂನಲ್ಲಿದ್ದ ಕ್ಯಾಶ್ ಬಾಕ್ಸ್ ಒಡೆಯಲು ಯತ್ನಿಸುತ್ತಿದ್ದಾಗ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.ಪೊಲೀಸರ ಪ್ರಕಾರ, ನಾಗಪ್ಪ ಬೆಳಗಿನ ಜಾವ 2:30 ರ ಸುಮಾರಿಗೆ ಎಟಿಎಂ ಒಳಗೆ ಪ್ರವೇಶಿಸಿ, ತಾನು ತಂದಿದ್ದ ಉಪಕರಣಗಳನ್ನು ಬಳಸಿ ಕ್ಯಾಶ್ ಬಾಕ್ಸ್ ಅನ್ನು ಹಾನಿಗೊಳಿಸಿದ್ದಾನೆ. ದೆಹಲಿಯಿಂದ ಹಿಡಿದು ವಿವಿಧ ಜಿಲ್ಲೆಗಳ ಎಟಿಎಂಗಳ ಮೇಲೆ ನಿಗಾ ಇಡುವ ದೆಹಲಿಯ ಕಣ್ಗಾವಲು ವ್ಯವಸ್ಥೆಯು ಈ ಕೃತ್ಯದ ಬಗ್ಗೆ ಎಚ್ಚರಿಕೆ ನೀಡಿದೆ.

- Advertisement -

Related news

error: Content is protected !!