Tuesday, July 21, 2026
spot_imgspot_img
spot_imgspot_img

ಬಾಗಲಕೋಟೆ: ಅಪ್ರಾಪ್ತ ಬಾಲಕನಿಂದ ಯುವಕನ ಹತ್ಯೆ

- Advertisement -
- Advertisement -

ಬಾಗಲಕೋಟೆ : ಅಪ್ರಾಪ್ತ ಬಾಲಕನೊಬ್ಬ ಯುವತಿಯೋರ್ವಳ ವಿಚಾರದಲ್ಲಿ ಯುವಕನನ್ನು ಕೊಲೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. 19 ವರ್ಷದ ರಾಹುಲ್ ಸಪ್ತಸಾಗರ ಕೊಲೆಯಾದ ಯುವಕ.

ಹೋಳಿ ಹಬ್ಬದ ವೇಳೆ ಯುವತಿಯ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿದ್ದು, ಇದೇ ವಿಚಾರ ಹತ್ಯೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಅಪ್ರಾಪ್ತ ಬಾಲಕ ತನ್ನ ಸ್ನೇಹಿತರೊಂದಿಗೆ ಬಂದು ರಾಹುಲ್ ಎಂಬಾತನ ಜೊತೆ ಗಲಾಟೆ ಮಾಡಿದ್ದು, ಬಳಿಕ ಬೈಕ್ ನ ಕೀ ಚೈನ್ ನಲ್ಲಿದ್ದ ಹರಿತವಾದ ಆಯುಧದಿಂದ ರಾಹುಲ್ ನ ಕುತ್ತಿಗೆಯ ಭಾಗಕ್ಕೆ ಚುಚ್ಚಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ರಾಹುಲ್ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

ಕೃತ್ಯ ಎಸಗಿದ 16 ವರ್ಷದ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಬಗ್ಗೆ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ಮೂ;ಕ ತಿಳಿದುಬಂದಿದೆ.

- Advertisement -

Related news

error: Content is protected !!